ರಾತ್ರಿ ಜೈಲಿನಲ್ಲೇ ಕಾಲ ಕಳೆದ ಅತ್ಯಾಚಾರ ಆರೋಪ ಎದುರಿಸುತ್ತಿರುವ ( murugha shree) ಸ್ವಾಮೀಜಿಗೆ ಇದೀಗ ಎದೆನೋವು ಕಾಣಿಸಿಕೊಂಡಿದೆ.
ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ( murugha shree) ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಎದೆ ನೋವಿನ ಹಿನ್ನಲೆಯಲ್ಲಿ ಕುಸಿದು ಬಿದ್ದು ಶ್ರೀಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ನಿನ್ನೆ ತಡ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದ ಶ್ರೀಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಮಧ್ಯರಾತ್ರಿ ಬಳಿಕ ಜೈಲು ಸೇರಿದ್ದ ಶ್ರೀಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಇದನ್ನು ಓದಿ : Murugha Shree Arrest : ಕೊನೆಗೂ 6 ದಿನಗಳ ಬಳಿಕ ಮುರುಘಾ ಶ್ರೀಗಳನ್ನು ವಶಕ್ಕೆ ಪಡೆದ ಪೊಲೀಸರು
ಇನ್ನು ಶ್ರೀಗಳ ಆರೋಗ್ಯ ಪರಿಸ್ಥಿತಿ ಕುರಿತಂತೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಡಾ. ಬಸವರಾಜ್ ಮಾಹಿತಿ ನೀಡಿದ್ದು, ಮುರುಘಾ ಶ್ರೀಗಳಿಗೆ ಬಿಪಿ ಶುಗರ್ ಜೊತೆಗೆ ಹೃದಯ ಸಮಸ್ಯೆಗಳಿದೆ. ಹೀಗಾಗಿ ಬೇರೆ ಆಸ್ಪತ್ರೆಗೆ ವರ್ಗಾಯಿಸಲು ಚಿಂತಿಸುತ್ತಿದ್ದೇವೆ ಅಂದಿದ್ದಾರೆ.
Discussion about this post