ಫೋಕ್ಸೋ ಪ್ರಕರಣ ದಾಖಲಾದ ಬಳಿಕ ಪೊಲೀಸರು ( Murugha Shree Arrest) ನಡೆದುಕೊಂಡ ರೀತಿ ಹಲವು ಅನುಮಾನ ಹುಟ್ಟಿಸಿತ್ತು
ಚಿತ್ರದುರ್ಗ : ಅತ್ಯಾಚಾರ ಪ್ರಕರಣ ಸಂಬಂಧ ಮುರುಘಾ ಮಠದ ಮುರುಘಾ ಶ್ರೀಗಳನ್ನು (Murugha Shree Arrest) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೋಕ್ಸೋ ಪ್ರಕರಣ ದಾಖಲಾದ 6 ದಿನಗಳ ಬಳಿಕ ಪೊಲೀಸರು ಶ್ರೀಗಳನ್ನು ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಾದ ಬಳಿಕ ಪೊಲೀಸರು ಮುರುಘಾ ಶ್ರೀಗಳನ್ನು ವಶಕ್ಕೆ ಪಡೆದಿದ್ದು, ಬಂಧನಕ್ಕೂ ಮುನ್ನ ಹಾಸ್ಟೆಲ್ ವಾರ್ಡನ್ ರಶ್ಮಿಯವರನ್ನು ವಿಚಾರಣೆ ನಡೆಸಲಾಗಿತ್ತು.
ಇದನ್ನು ಓದಿ : King Cobra Car : ಕಾರಿನಲ್ಲಿ ಕಾಳಿಂಗ ಸರ್ಪದೊಂದಿಗೆ ಒಂದು ತಿಂಗಳ ಪ್ರವಾಸ : ಕೇರಳದಲ್ಲೊಂದು ಭಯಾನಕ ಘಟನೆ
ಚಿತ್ರದುರ್ಗದ ಮುರುಘಾ ಮಠಕ್ಕೆ ಸಿವಿಲ್ ಡ್ರೆಸ್ ನಲ್ಲಿ ಆಗಮಿಸಿದ ಪೊಲೀಸರು ರಾತ್ರಿ 10.15ಕ್ಕೆ ಶ್ರೀಗಳನ್ನು ವಶಕ್ಕೆ ಪಡೆದಿದ್ದಾರೆ. ಮಠದ ವಿದ್ಯಾರ್ಥಿನಿಯರು ಅತ್ಯಾಚಾರ ಕೇಸ್ ದಾಖಲಿಸಿದ್ದರೂ ಪೊಲೀಸರು ಶ್ರೀಗಳ ತನಿಖೆಗೆ ಒತ್ತುಕೊಟ್ಟಿರಲಿಲ್ಲ. ಕನಿಷ್ಟ ಹೇಳಿಕೆಯನ್ನೂ ಪಡೆದಿರಲಿಲ್ಲ ಅನ್ನಲಾಗಿದೆ.
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಗುರುವಾರ ಮುರುಘಾ ಶ್ರೀಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಅವಕಾಶ ಕಲ್ಪಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿತ್ತು.
ಇದೀಗ ಶ್ರೀಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇದಾದ ಬಳಿಕ ಮೆಡಿಕಲ್ ಟೆಸ್ಟ್ ಗೆ ಒಳಪಡಿಸಲಾಗುತ್ತದೆ. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಒಂದು ವೇಳೆ ಈ ಪ್ರಕ್ರಿಯೆಗಳು ನಡೆಯದಿದ್ರೆ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿ ಕಳುಹಿಸಿಕೊಡುವ ಸಾಧ್ಯತೆಗಳು ಕೂಡಾ ಇದೆ.
Discussion about this post