ಮುಂಬೈ: ದೇಶದ ಹಲವು ಭಾಗಗಳಲ್ಲಿ ವರುಣರಾಯನ ಅಬ್ಬರ ಹೆಚ್ಚಾಗಿದ್ದು, ಮಹಾರಾಷ್ಟ್ರದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಾಲಿಯಾ ಗ್ರಾಮದಲ್ಲಿ ಭಾರಿ ಮಳೆಗೆ ಸಂಭವಿಸಿದ ಭೂ ಕುಸಿತದಲ್ಲಿ 39 ಮಂದಿ ಮೃತಪಟ್ಟಿದ್ದಾರೆ. ಇನ್ನು ಮಳೆಯಬ್ಬರಕ್ಕೆ ಬಲಿಯಾದವರ ಸಂಖ್ಯೆ 76ಕ್ಕೆ ಏರಿದ್ದು 38 ಜನ ಗಾಯಗೊಂಡಿದ್ದಾರೆ. ಇನ್ನು 30 ಜನ ನಾಪತ್ತೆಯಾಗಿದ್ದಾರೆ.
ರಾಯಗಡ, ರತ್ನಗಿರಿ, ಕೊಂಕಣ ಪ್ರದೇಶ, ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹ ದೊಡ್ಡ ಮಟ್ಟದ ಹಾನಿ ಉಂಟು ಮಾಡಿದ್ದು, 90,000 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ನಡುವೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಸಿಡಿಲು ಬಡಿದ ನಾಲ್ಕು ಪ್ರತ್ಯೇಕ ಘಟನೆಗಳಲ್ಲಿ ಐವರು ಮೃತಪಟ್ಟಿದ್ದು, 18 ಜನರು ಗಾಯಗೊಂಡಿದ್ದಾರೆ.
ಉರೆಹಾ, ಪಿಪಾರಿಯಾ ದೌನ್, ಚೌಮುಖ ಹಾಗೂ ಸಿಮ್ರಾಖುರ್ದ್ ಗ್ರಾಮಗಳಲ್ಲಿ ಈ ಘಟನೆಗಳು ಸಂಭವಿಸಿದ್ದು, ಉರೆಹಾ, ಪಿಪಾರಿಯಾ ದೌನ್ ಹಾಗೂ ಚೌಮುಖ ಗ್ರಾಮಗಳಲ್ಲಿ ತಲಾ ಒಬ್ಬರು ಹಾಗೂ ಸಿಮ್ರಾಖುರ್ದ್ನಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Discussion about this post