ಭೋಪಾಲ್ : ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಇನ್ಮುಂದೆ ಕುಲಗುರು ಎಂದು ಎಂದು ಮರುನಾಮಕರಣ ಮಾಡಲು ಮಧ್ಯಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಧ್ಯಪ್ರದೇಶ ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ಹಿಂದಿಯಲ್ಲಿ ಜಿಲ್ಲಾಧಿಕಾರಿಯನ್ನು ಜಿಲ್ಲಾಧೀಶ್ ಎಂದು ಕರೆಯಲಾಗುತ್ತದೆ. ಅದು ರಾಜ ಅನ್ನುವುದನ್ನು ಪ್ರತಿನಿಧಿಸುತ್ತದೆ. ಹೀಗಾಗಿಯೇ ವೈಸ್ ಚಾನ್ಸೆಲರ್ ಅನ್ನು ಕುಲಪತಿ ಎಂದು ಕರೆಯುತ್ತಾರೆ. ಬದಲಾಗಿ ಕುಲಗುರು ಎಂದು ಕರೆಯುವುದರಲ್ಲಿ ಹೆಚ್ಚು ಆಪ್ತತೆಯಿದೆ.
ಹೀಗಾಗಿ ಈ ಪ್ರಸ್ತಾವವನ್ನು ಸಂಪುಟ ಸಭೆಯಲ್ಲಿ ಇಡಲಾಗುವುದು. ಒಂದು ವೇಳೆ ಸಂಪುಟ ಸಮ್ಮತಿ ಸೂಚಿಸಿದರೆ ವಿಧಾನಸಭೆಯಲ್ಲಿ ಮಂಡಿಸಲಾಗುತ್ತದೆ. ಅನುಮೋದನೆ ಸಿಕ್ಕ ಬಳಿಕ ರಾಜ್ಯದ ಎಲ್ಲ ವಿವಿಗಳ ಕುಲಪತಿಗಳನ್ನು ಕುಲಗುರು ಎಂದೇ ಕರೆಯಲಾಗುತ್ತದೆ ಅಂದಿದ್ದಾರೆ.
Discussion about this post