ಕೃತಕ ಮಳೆ ( artificial rain ) ಕುರಿತಂತೆ ಸುಪ್ರೀಂಕೋರ್ಟ್ ಇಂದು ನಿರ್ಧಾರ ಕೈಗೊಳ್ಳಬಹುದು
ವಾಯು ಮಾಲಿನ್ಯದಿಂದ ತತ್ತರಿಸಿ ಹೋಗಿರುವ ರಾಜಧಾನಿ ದೆಹಲಿ, ಇದೀಗ ವಿಷ ವರ್ತುಲವಾಗಿ ಪರಿಣಮಿಸಿದೆ. ಪ್ರತೀ ವರ್ಷ ಇದೇ ಹೊತ್ತಿಗೆ ಅನೇಕ ಕಾರಣಗಳಿಂದ ದೆಹಲಿ ಗ್ಯಾಸ್ ಛೇಂಬರ್ ಆಗಿ ಪರಿವರ್ತಿತವಾಗುತ್ತದೆ. ಹತ್ತಾರು ಸಲ ನ್ಯಾಯಾಲಯಗಳು ಆದೇಶ ನೀಡಿದ್ದರೂ ಕೂಡಾ ದೆಹಲಿ ಸುತ್ತಮುತ್ತಲಿನ ಪ್ರದೇಶದ ಜನರ ಅಸಹಕಾರದಿಂದ ದೆಹಲಿಯಲ್ಲಿ ಉಸಿರುಗಟ್ಟುತ್ತದೆ. ಈ ಬಾರಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃತಕ ಮಳೆ ( artificial rain ) ಸುರಿಸಲು ಚಿಂತಿಸಲಾಗಿದೆ.
ಈ ಚಿಂತನೆಯ ಪ್ರಸ್ತಾಪ ಹೊತ್ತಿನಲ್ಲಿ ದೆಹಲಿಯಲ್ಲಿ ಗುರುವಾರ ರಾತ್ರಿ ಸಣ್ಣ ಮಟ್ಟಿನ ಮಳೆಯಾಗಿದ್ದು, ಶುಕ್ರವಾರ ಸಂಜೆಯೂ ಮಳೆ ಸುರಿಯುವ ಸಾಧ್ಯತೆಗಳಿದೆ. ಹೀಗಾಗಿ ಮಾಲಿನ್ಯದ ಪ್ರಮಾಣ ತಗ್ಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಈ ನಡುವೆ ವಾಯು ಮಾಲಿನ್ಯ ನಿಯಂತ್ರಿಸಲು ಈ ತಿಂಗಳು ಮೋಡ ಬಿತ್ತನೆ ಮೂಲಕ ಕೃತಕ ಮಳೆ ಸುರಿಸಲು ಸರ್ಕಾರ ಚಿಂತಿಸಿದ್ದು, ನ್ಯಾಯಾಲಯ ಅನುಮತಿ ನೀಡಿದರೆ ನಾವು ಕೃತಕ ಮಳೆ ಯೋಜನೆ ಜಾರಿಗೊಳಿಸುತ್ತೇವೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.
ಇದನ್ನೂ ಓದಿ : ಬ್ಯಾಂಕ್ ಹಣವನ್ನೇ ಲೂಟಿ ಹೊಡೆದ ಯೂನಿಯನ್ ಬ್ಯಾಂಕ್ ( union bank) ಸ.ಮ್ಯಾನೇಜರ್
ಈ ಸಂಬಂಧ ಸಚಿವ ರೈ ಅವರು ಐಐಟಿ ಕಾನ್ಪುರ ವಿಜ್ಞಾನಿಗಳೊಂದಿಗೆ ಸಭೆಯನ್ನು ನಡೆಸಿದ್ದು, ವಿಜ್ಞಾನಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ಆದರೆ ವಾತಾವರಣದಲ್ಲಿ ಮೋಡ ಅಥವಾ ತೇವಾಂಶವಿದ್ದರೆ ಮಾತ್ರ ಮೋಡ ಬಿತ್ತನೆ ಸಾಧ್ಯ. ಈಗಿನ ಪ್ರಕಾರ ನವೆಂಬರ್ 20-21 ರ ಹೊತ್ತಿಗೆ ಮೋಡ ಬಿತ್ತನೆಗೆ ಸೂಕ್ತ ವಾತಾವರಣ ಸೃಷ್ಟಿಯಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವಿಜ್ಞಾನಿಗಳ ಸಲಹೆಯಂತೆ ಇದೀಗ ಮೋಡ ಬಿತ್ತನೆಯ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು, ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಈ ಪ್ರಸ್ತಾಪವನ್ನು ಕೋರ್ಟ್ ಮುಂದೆ ಇರಿಸಲಾಗುತ್ತದೆ.

ಕೃತಕ ಮಳೆ ಎಂದರೇನು? WHAT IS ARTIFICIAL RAIN?
ಮೋಡ ಬಿತ್ತನೆಯನ್ನೇ ಕೃತಕ ಮಳೆ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯು ಸಿಲ್ವರ್ ಅಯೋಡೈಡ್ ಅಥವಾ ಪೊಟ್ಯಾಸಿಯಮ್ ಅಯೋಡೈಡ್ನಂತಹ ಪದಾರ್ಥಗಳನ್ನು ವಿಮಾನ ಅಥವಾ ಹೆಲಿಕಾಪ್ಟರ್ಗಳ ಮೂಲಕ ಮೋಡಗಳ ಮೇಲೆ ಸಿಂಪಡಿಸಲಾಗುತ್ತದೆ.
ಹಾಗಂತ ಯಾವಾಗ ಬೇಕಾದರೂ ಕೃತಕ ಮಳೆ ಬರಿಸುವ ಹಾಗಿಲ್ಲ. ಮೋಡ ಬಿತ್ತನೆಯ ಯಶಸ್ಸು ಕಾಣಬೇಕಾದರೆ, ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳು ಇರಬೇಕು. ವಾತಾವರಣದಲ್ಲಿ ಸಾಕಷ್ಟು ತೇವಾಂಶ, ಮಳೆ ಸುರಿಯಬೇಕಾಗಿರುವ ಪ್ರದೇಶದಲ್ಲೇ ಆಕಾಶದ ಸುತ್ತ ಮುತ್ತ ಮೋಡ, ಪೂರಕವಾದ ಗಾಳಿ ಅತೀ ಅವಶ್ಯಕ.
#WATCH | UP: Noida witnesses sudden change in weather; receives light rain pic.twitter.com/O5tQeGdyRt
— ANI (@ANI) November 9, 2023
ಬರ ಪರಿಸ್ಥಿತಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೃತಕ ಮಳೆಯನ್ನು ಸುರಿಸುವ ಪ್ರಯತ್ನಕ್ಕೆ ಕೈ ಹಾಕಲಾಗುತ್ತದೆ.
ಹಿಂದೊಮ್ಮೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೋಡ ಬಿತ್ತನೆ ಯಶಸ್ವಿಯಾಗಿಲ್ಲ ಅನ್ನುವ ಹಾರಿಕೆ ಉತ್ತರ ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Discussion about this post