ಚಿನ್ನದ ಗಣಿ ಕುಸಿದ ಪರಿಣಾಮ 18 ಮಂದಿ ಜೀವಂತ ಸಮಾಧಿಯಾಗಿರುವ ಘಟನೆ ನೈಜಿರಿಯಾ ಗಡಿಯ ದಕ್ಷಿಣ ನೈಜರ್ ನ ಗರೀನ್ ಲಿಮಾನ್ ಗಣಿಯಲ್ಲಿ ನಡೆದಿದೆ. ( ನೈಜರ್ ಹಾಗೂ ನೈಜೀರಿಯಾ ಅಕ್ಕಪಕ್ಕದ ರಾಷ್ಟ್ರಗಳಾಗಿವೆ) ಇನ್ನು ಘಟನೆಯಲ್ಲಿ 7 ಮಂದಿಯ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಣಿಯ ಬಾವಿಯೊಳಗೆ ಕಾರ್ಮಿಕರು ಅಗೆಯುವ ಕಾರ್ಯ ನಡೆಸುತ್ತಿದ್ದ ವೇಳೆ ಏಕಾಏಕಿ ಗೋಡೆಗಳು ಕುಸಿದು ಬಿದ್ದಿದೆ. ಘಟನೆ ನಡೆದ ತಕ್ಷಣ ರಕ್ಷಣೆ ಕಾರ್ಯಾಚರಣೆ ಪ್ರಾರಂಭಿಸಲಾಯ್ತು. ಆದರೆ ಅಷ್ಟು ಹೊತ್ತಿಗೆ ಕಾಲ ಮೀರಿ ಹೋಗಿತ್ತು. ಹೀಗಾಗಿ 7 ಮಂದಿಯನ್ನು ಮಾತ್ರ ರಕ್ಷಿಸಲು ಸಾಧ್ಯವಾಯ್ತು. ಉಳಿದ 18 ಮಂದಿ ಜೀವಂತ ಸಮಾಧಿಯಾಗಿದ್ದು, ಇನ್ನೂ ಮೂರು ಮೃತದೇಹಗಳನ್ನು ಹೊರ ತೆಗೆಯಬೇಕಾಗಿದೆ. ನೈಜರ್ನ ಗರೀನ್ ಲಿಮಾನ್ ಗಣಿಯನ್ನು ಕೆಲ ತಿಂಗಳುಗಳ ಹಿಂದಷ್ಟೇ ಕಂಡು ಹಿಡಿಯಲಾಗಿತ್ತು.
2020ರ ಸಪ್ಟಂಬರ್ ನಲ್ಲಿ ಕಾಂಗೋದಲ್ಲಿ ಸಂಭವಿಸಿದ ಚಿನ್ನದ ಗಣಿ ಕುಸಿತದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಕಳಪೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಕಾರಣ ಪದೇ ಪದೇ ಚಿನ್ನದ ಗಣಿ ಕುಸಿತ ಸಂಭವಿಸುತ್ತಲೇ ಇರುತ್ತದೆ. ದುಬಾರಿ ಚಿನ್ನವನ್ನು ಹುಡುಕಿ ತೆಗೆಯುವ ಈ ಕಾರ್ಮಿಕರ ಬದುಕು ಮಾತ್ರ ಇಂದಿಗೂ ಕತ್ತಲಲ್ಲಿರುವುದು ವಿಪರ್ಯಾಸವೇ ಸರಿ.
18 people killed and seven others injured in southern Niger after an artisanal mine collapsed,
Discussion about this post