ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ನನ್ನು ಉತ್ತರ ಪ್ರದೇಶದ ಅಮ್ರೋಹ ಪೊಲೀಸರು ಭಾನುವಾರ ಮಧ್ಯರಾತ್ರಿ ಬಂಧಿಸಿದ್ದಾರೆ.
ಮಗಳ ಜೊತೆ ಏಕಾಏ ಶಮಿ ಮನೆಗೆ ನುಗ್ಗಿದ ಹಸಿನ್, ಶಮಿ ತಾಯಿ ಜೊತೆ ಗಲಾಟೆ ನಡೆಸಿದ್ದರು. ಈ ವೇಳೆ ಆತಂಕಗೊಂಡ ಶಮಿ ಮನೆಯವರು ಕೂಡಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಅಮ್ರೋಹ ಠಾಣಾ ಪೊಲೀಸರು ಸೆಕ್ಷನ್ 151 ಅಡಿಯಲ್ಲಿ ಬಂಧಿಸಿದ್ದಾರೆ.
ನಂತರ ಅವರನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ.
Discussion about this post