ಬೆಂಗಳೂರು : ಬೆಳಗಾವಿ ಶಾಸಕ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆಯ ವಿಡಿಯೋ ಇದೀಗ ಬಯಲಾಗಿದೆ.
ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡ ವಿಡಿಯೋ ಇದು ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಮತ್ತು ಯುವತಿಯೊಬ್ಬಳಿರುವ ಹಲವಾರು ವಿಡಿಯೋ ಕ್ಲಿಪ್ ಗಳು ಇದೀಗ ಬಹಿರಂಗಗೊಂಡಿದ್ದು, ಕೆಲ ವಿಡಿಯೋದಲ್ಲಿ ಮಂಚದಾಟ ಅಡಗಿದ್ರೆ, ಮತ್ತೆ ಕೆಲ ವಿಡಿಯೋಗಳಲ್ಲಿ ವಿಡಿಯೋ ಕಾಲ್ ನಲ್ಲೇ ನಡೆಯಬಾರದ್ದು ನಡೆದಿದೆ.
ಮತ್ತೆ ಕೆಲವು ವಿಡಿಯೋಗಳಲ್ಲಿ ಇಬ್ಬರ ಮಾದಕ ಮಾತುಕತೆಗಳಿದ್ದು, ಸಾಹುಕಾರನ ಕಾಮಗಾರಿ ಯಡಿಯೂರಪ್ಪ ಸರ್ಕಾರಕ್ಕೆ ಮಸಿ ಬಳಿದಿದೆ.
ಕರ್ನಾಟಕದ ಜನತೆಗೆ ಈ ವಿಡಿಯೋ ಹೊಸದಾಗಿರಬಹುದು, ಆದರೆ ರೇಣುಕಾಚಾರ್ಯ, ಡಿಕೆಶಿ, ಎಚ್. ವಿಶ್ವನಾಥ್, ಯತ್ನಾಳ್ ಗೆ ಇದು ಹೊಸ ವಿಡಿಯೋಗಳಲ್ಲ.
ಈ ಹಿಂದೆಯೇ ಈ ನಾಯಕರು ವಿಡಿಯೋ ಸಿಡಿ ಬಗ್ಗೆ ಪ್ರಸ್ತಾಪಿಸಿದ್ದರು.
ಒಟ್ಟಿನಲ್ಲಿ ಯಡಿಯೂರಪ್ಪ ಸಿಎಂ ಆಗಲು ಕಾರಣರಾದ ಮುಂಬೈ ಬಾಯ್ಸ್ ತಂಡದ ಸದಸ್ಯರೊಬ್ಬರು ಬಿಜೆಪಿ ಪಕ್ಷವನ್ನು ಸಂಕಷ್ಟಕ್ಕೆ ಗುರಿ ಮಾಡಿದ್ದಾರೆ.
ಕೇರಳ ತಮಿಳುನಾಡು ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಬಿಜೆಪಿಯನ್ನು ಎದುರಿಸಲು ವಿಷಯಗಳಿಲ್ಲದೆ ಪರದಾಡುತ್ತಿತ್ತು. ಇದೀಗ ರಮೇಶ್ ಜಾರಕಿಹೊಳಿ ಅವರಿಗೆಲ್ಲಾ ವಿಷಯ ಕೊಟ್ಟಿದ್ದಾರೆ.
Discussion about this post