ಭಾರತದ ವಿರುದ್ಧ ಸದಾ ಕಾಲು ಕೆರೆದು ಜಗಳ ಬರುವ ಪಾಕಿಸ್ತಾನ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಉಗ್ರರನ್ನು ಘೋಷಿಸಿ ಬೆಳೆಸಿದ ಕರ್ಮಕ್ಕೆ ಆ ರಾಷ್ಟ್ರದಲ್ಲಿ ಇದೀಗ ಅರಾಜಕತೆ ಸೃಷ್ಟಿಯಾಗುವ ಪರಿಸ್ಥಿತಿ ತಲೆದೋರಿದೆ.
ಅದೆಷ್ಟರ ಮಟ್ಟಿಗೆ ಅಂದರೆ ಪಾಕಿಸ್ತಾನದಲ್ಲಿ ಇದೀಗ
ಪೆಟ್ರೋಲ್ ಡಿಸೇಲ್ ಗಿಂತ ಹಾಲು ದುಬಾರಿಯಾಗಿದೆ. ಕಳೆದ ಎರಡು
ದಿನಗಳಿಂದ
ಪಾಕಿಸ್ತಾನದ ಸಿಂಧ್ ಮತ್ತು ಕರಾಚಿ ಭಾಗಗಳಲ್ಲಿ ಲೀಟರ್ ಹಾಲು 120 ರಿಂದ 140 ರೂ.ಗೆ
ಮಾರಾಟವಾಗಿದೆ.
ಇದೇ ಭಾಗದಲ್ಲಿ ಪೆಟ್ರೋಲ್ 113 ರೂ. ಪ್ರತಿ ಲೀಟರ್ ಮತ್ತು ಡೀಸೆಲ್ 91 ರೂ. ಪ್ರತಿ ಲೀಟರ್ ಗೆ ಮಾರಾಟಗೊಂಡಿದೆ.
ಮಂಗಳವಾರ ಮೊಹರಂ ಹಬ್ಬವಿದ್ದ ಕಾರಣ ಹಾಲಿನ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಮೊಹರಂ ಸಂದರ್ಭದಲ್ಲಿ ಮೆರವಣಿಗೆ ಸಾಗುವ ವೇಳೆ ಜನರಿಗಾಗಿ ತಂಪಾದ ಪಾನೀಯ, ಹಾಲು, ಹಾಲಿನ ಇತರೆ ಉತ್ಪನ್ನಗಳನ್ನು ನೀಡಲಾಗುತ್ತದೆ. ಹೀಗಾಗಿ ಕಳೆದ ಎರಡು ದಿನಗಳಲ್ಲಿ ಹಾಲಿಗೆ ವಿಪರೀತ ಬೇಡಿಕೆ ಹೆಚ್ಚಾಗಿತ್ತು. ಈ ಕಾರಣದಿಂದ ಪೆಟ್ರೋಲ್ ಡಿಸೇಲ್ ದರವನ್ನು ಹಿಂದಿಕ್ಕಿ ಹಾಲಿನ ದರ ಮುನ್ನುಗಿತ್ತು ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಪೆಟ್ರೋಲ್ ಗಿಂತ ಹಾಲಿನ ದರವೇ ಜಾಸ್ತಿ....! 1
Discussion about this post