ಬೆಂಗಳೂರು : ಒಲಿಂಪಿಕ್ ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿರುವ ನೀರಜ್ ಚೋಪ್ರಾ ಭಾರತೀಯ ಪಾಲಿಗೆ ಹೀರೋ ಆಗಿದ್ದಾರೆ. ಈ ಚಿನ್ನದ ಸಾಧನೆಯ ಹಿಂದೆ ಕನ್ನಡಿಗರೊಬ್ಬರ ಶ್ರಮವಿದೆ ಅನ್ನುವುದೇ ಕರುನಾಡಿಗೆ ಹೆಮ್ಮೆ. ಚೋಪ್ರಾ ಅವರನ್ನು ಮೊದ ಮೊದಲು ಜಾವಲಿನ್ ಎಸೆತ ಕ್ಷೇತ್ರಕ್ಕೆಂದು ಸಿದ್ದಗೊಳಿಸಿದ್ದು ಕನ್ನಡಿಗ ಕಾಶಿನಾಥ್ ನಾಯ್ಕ್.
ತನ್ನ ಹಾಗೂ ಚೋಪ್ರಾ ನಡುವಿನ ಸಂಬಂಧ ಕುರಿತಂತೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಕಾಶಿನಾಥ್ ಅವರು , ಮೂರು ವರ್ಷಗಳ ಕಾಲ: ಛೋಪ್ರಾ 2015 ರಿಂದ 2017ರ ತನಕ ನನ್ನಿಂದ ತರಬೇತಿ ಪಡೆದಿದ್ದರು. ಅವತ್ತಿನಿಂದಲೂ ಅವರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ನಾನು ತರಬೇತಿ ನೀಡುವಾಗ್ಲೇ ಮುಂದೊಂದು ದಿನ ಚಿನ್ನ ಗೆಲ್ಲುತ್ತಾರೆ ಅನ್ನುವ ವಿಶ್ವಾಸವಿತ್ತು ಅಂದಿದ್ದಾರೆ.
ಹರಿಯಾಣ ಮೂಲದ ಚೋಪ್ರಾ ಅವರಿಗೆ ಜಾವಲಿನ ಎಸೆತಕ್ಕೆ ಬೇಕಾದ ದೈವದತ್ತವಾದ ಪ್ರತಿಭೆಯಿತ್ತು. ಅವರಿಗೆ ಗುರಿ ಸಾಧಿಸುವ ಕಲೆಯೂ ಗೊತ್ತಿದೆ ತಂತ್ರಗಾರಿಕೆ, ಗುರಿಯ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು. ದಿನಕ್ಕೆ ಏನಿಲ್ಲ ಅಂದರೂ ಐದಾರು ತಾಸು ನಿರಂತರ ಹಾಗೂ ಕಠಿಣ ಅಭ್ಯಾಸ ಮಾಡುತ್ತಿದ್ದರು. ಅವರ ಪರಿಶ್ರಮವೇ ಚಿನ್ನದ ಸಾಧನೆಗೆ ಕಾರಣ ಎಂದು ಕಾಶಿನಾಥ್ ಹೇಳಿದ್ದಾರೆ.
Discussion about this post