ಎರಡು ಹಂತಗಳಲ್ಲಿ ಜಾರಿಯಾದ ನಿರ್ಬಂಧವನ್ನು(Mangaluru Night curfew) ಇದೀಗ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ
ಮಂಗಳೂರು : ಸರಣಿ ಅಹಿತಕರ ಘಟನೆ ಹಿನ್ನಲೆಯಲ್ಲಿ ಜಾರಿಗೊಳಿಸಿದ ನಿರ್ಬಂಧಗಳನ್ನು (Mangaluru Night curfew) ಮುಕ್ತಗೊಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಸರಣಿ ಕೊಲೆ ಹಿನ್ನಲೆಯಲ್ಲಿ ಮೊದಲ ಹಂತದಲ್ಲಿ 6 ರಿಂದ 6 ಗಂಟೆ ತನಕದ ನಿರ್ಬಂಧ ಜಾರಿಗೊಳಿಸಲಾಗಿತ್ತು. ಎರಡನೇ ಹಂತದಲ್ಲಿ ಇದನ್ನು 9 ಗಂಟೆಗೆ ವಿಸ್ತರಿಸಲಾಗಿತ್ತು. ಜೊತೆಗೆ ಸಂಜೆ 6 ಗಂಟೆಗೆ ಬಾರ್ ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿತ್ತು.
ಇದೀಗ ಎಲ್ಲಾ ರಾತ್ರಿ ನಿರ್ಬಂಧ (Mangaluru Night curfew)ತೆರವುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ರಾತ್ರಿ 9 ಗಂಟೆಯ ಬಳಿಕ ಇದ್ದ ವ್ಯಾಪಾರ ನಿರ್ಬಂಧ ತೆರವುಗೊಂಡಿದೆ. ಸೋಮವಾರದಿಂದ ಅಂಗಡಿ, ವೈನ್ ಶಾಪ್, ಬಾರ್ ಎಂದಿನಂತೆ ಕಾರ್ಯಾಚರಿಸಲು ಅವಕಾಶ ಕಲ್ಪಿಸಲಾಗಿದೆ.
ಜನರ ಓಡಾಟಕ್ಕೂ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಆಗಸ್ಟ್ 14 ತನಕ 144 ಸೆಕ್ಷನ್ ಮುಂದುವರಿಕೆ ಮಾಡಿರುವುದಾಗಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ. ಈ ನಡುವೆ ರಾತ್ರಿ ಹೆಚ್ಚು ಓಡಾಟ ನಡೆಸದಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ : Wardrobe malfunction : ವಸ್ತ್ರ ದೋಷದಿಂದ ಗುಪ್ತಾಂಗ ಹೊರ ಬಿದ್ದು ಸೋತ ಅಥ್ಲೀಟ್
Mangaluru Night curfew withdrawn, prohibitory orders extended till Aug 14
Discussion about this post