ಮಂಗಳೂರಿನ ಲಿಪ್ ಲಾಕ್ ಪ್ರಕರಣದ ಬಳಿಕ ಸೋಮವಾರ ರಾತ್ರಿ ಪಬ್ ದಾಳಿಯಾಗಿದೆ ಎಂದು ಸುದ್ದಿಯಾಗಿತ್ತು.(Mangalore pub) ಆದರೆ ಪಬ್ ದಾಳಿಯನ್ನು ಪೊಲೀಸರು ಅಲ್ಲಗಳೆದಿದ್ದು, ಅಂತಹ ಘಟನೆ ನಡೆದಿಲ್ಲ ಅಂದಿದ್ದಾರೆ
ಮಂಗಳೂರಿನ ಲಿಪ್ ಲಾಕ್ ಪ್ರಕರಣದ ಬಳಿಕ ಸೋಮವಾರ ರಾತ್ರಿ ಪಬ್ (Mangalore pub) ದಾಳಿಯಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಪಬ್ ದಾಳಿಯನ್ನು ಪೊಲೀಸರು ಅಲ್ಲಗಳೆದಿದ್ದು, ಅಂತಹ ಘಟನೆ ನಡೆದಿಲ್ಲ ಅಂದಿದ್ದಾರೆ
ಮಂಗಳೂರು : ಸೋಮವಾರ ರಾತ್ರಿ ಮಂಗಳೂರಿನ ಬಲ್ಮಠದಲ್ಲಿರುವ ರಿಸೈಕಲ್ ರೆಸ್ಟೋರೆಂಟ್ ಮೇಲೆ ದಾಳಿ ನಡೆದಿದೆ ಎಂದು ಸುದ್ದಿಯಾಗಿತ್ತು. ಮತ್ತೆ ಮಂಗಳೂರಿನಲ್ಲಿ ಪಬ್ ದಾಳಿ (Mangalore pub) ಅನ್ನುವ ವದಂತಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಆದರೆ ಇದೀಗ ಎಲ್ಲಾ ಗಾಳಿ ಸುದ್ದಿಗಳನ್ನು ನಿರಾಕರಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, (n. shashi kumar is city police commissioner mangalore)ಮಂಗಳೂರಿನಲ್ಲಿ ಪಬ್ ಮೇಲೆ ದಾಳಿಯಾಗಿಲ್ಲ (Mangalore pub) ಅಂದಿದ್ದಾರೆ.
ಇದನ್ನೂ ಓದಿ : vijayanand kashappanavar : ಎರಡನೇ ಮದುವೆಯಾದ್ರ ವಿಜಯಾನಂದ ಕಾಶಪ್ಪನವರ : ಮಗುವಿನ ಜನನ ಪ್ರಮಾಣ ಪತ್ರ ವೈರಲ್
ಬಲ್ಮಠ ರಸ್ತೆಯಲ್ಲಿರುವ ರಿಸೈಕಲ್ ರೆಸ್ಟೋರೆಂಟ್ ಗೆ ಬೆಳಗ್ಗೆ ಭೇಟಿ ನೀಡಿದ ಪೊಲೀಸ್ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಸಂಘಟನೆಯೊಂದಕ್ಕೆ ಸೇರಿದ ಹುಡುಗರು ಬಂದಿದ್ದಾರೆ. ಈ ವೇಳೆ ಬೌನ್ಸರ್ ದಿನೇಶ್ ಅನ್ನುವವರನ್ನು ಭೇಟಿಯಾಗಿ ನಿಮ್ಮ ಬಾರ್ ಒಳಗಡೆ ಮೈನರ್ ಹುಡುಗ ಹುಡುಗಿ ಇದ್ದಾರೆ ಅಂದಿದ್ದಾರೆ. ಈ ವಿಷಯವನ್ನು ದಿನೇಶ್ ಮ್ಯಾನೇಜರ್ ಬಳಿ ಹೇಳಿದ್ದಾರೆ.
ಬಳಿಕ ಒಳಗಡೆ ಹೋಗಿ ಪರಿಶೀಲನೆ ನಡೆಸಿದ ಮ್ಯಾನೇಜರ್, ಸ್ಥಳೀಯ ಕಾಲೇಜಿನ ಕೆಲ ವಿದ್ಯಾರ್ಥಿಗಳು ಇರುವುದನ್ನು ಗುರುತಿಸಿದ್ದಾರೆ ಮತ್ತು ಅವರನ್ನು ಹೊರಗೆ ಹೋಗಲು ಹೇಳಿದ್ದಾರೆ. ಬೌನ್ಸರ್ ಕೊಟ್ಟಿರುವ ಮಾಹಿತಿಯಂತೆ ಸಂಘಟನೆ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ, ಹೊರ ಭಾಗದಲ್ಲೇ ಮಾತನಾಡಿ ಹೋಗಿದ್ದಾರೆ.

ಈ ಘಟನೆ ಬಗ್ಗೆ ಸಿಸಿಟಿವಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊರಗಿನ ವ್ಯಕ್ತಿಗಳು ಬಂದು ಐಡಿ, ಲೈಸೆನ್ಸ್ ಕೇಳಲು ಅವಕಾಶವಿಲ್ಲ. ಈ ಬಗ್ಗೆ ಸೂಕ್ತ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತ ಅಂದಿದ್ದಾರೆ.
ಇನ್ನು ಮೊನ್ನೆ ನಡೆದ ಅಶ್ಲೀಲ ವಿಡಿಯೋ ಪ್ರಕರಣಕ್ಕೂ ಈ ಘಟನೆಗೂ ಸಂಬಂಧವಿಲ್ಲ ಅಂದಿರುವ ಪೊಲೀಸ್ ಆಯುಕ್ತರು, ಅಂತಿಮ ಪದವಿ ವಿದ್ಯಾರ್ಥಿಗಳು ಪಬ್ ಗೆ ಬಂದಿರುವ ಮಾಹಿತಿ ಪ್ರಾಥಮಿಕ ಹಂತದಲ್ಲಿ ಲಭ್ಯವಾಗಿದೆ. ಈ ಪಬ್ ನಿಯಮದ ಪ್ರಕಾರ 21 ವರ್ಷದವರು ಪಬ್ ಗೆ ಬರಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ನಂತರವೇ ಮುಂದಿನ ಕ್ರಮಕ್ಕೆ ಹೆಜ್ಜೆ ಇಡಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.
Discussion about this post