Sunday, April 18, 2021

ಕೋಳಿ ಮಾಂಸದಂಗಡಿಯಲ್ಲಿ ದನದ ಮಾಂಸ ಮಾರಾಟ : ಇಬ್ಬರ ಬಂಧನ

Must read

- Advertisement -
- Advertisement -

ಮಂಗಳೂರು : ಕೋಳಿ ಮಾರಾಟದ ಅಂಗಡಿಯ ಲೈಸೆನ್ಸ್ ಪಡೆದು ದನದ ಮಾಂಸ ಮಾರಾಟ ಮಾಡುತ್ತಿದ್ದ ಖದೀಮರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಬಜಪೆಯ ಮೂಡುಪೆರಾರ ಗ್ರಾಮದ ಸೂರಲ್ಪಾಡಿಯಲ್ಲಿ ಸೆಲ್ವಾ ಚಿಕನ್ ಸೆಂಟರ್ ಅಂಗಡಿ ತೆರೆದಿದ್ದ ಇವರು ಹೆಸರಿಗೆ ಮಾತ್ರ ಕೋಳಿ ಅಂಗಡಿ ಇಟ್ಟಿದ್ದರು.

ಇವರ ದುಷ್ಕೃತ್ಯದ ಕುರಿತಂತೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಬಜಪೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಮಹಮ್ಮದ್ ಸಮೀರ್ ಮಚ್ಚು ಮಹಮ್ಮದ್ ಶಫೀಕ್ ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 23 ಕೆಜಿ ದನದ ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ ಮಾರುತಿ ಓಮ್ನಿ ಕಾರು ವಶಪಡಿಸಿಕೊಳ್ಳಲಾಗಿದೆ.

ಕದ್ದ ದನವನ್ನು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದಾರೆ ಅನ್ನುವ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆಯಾಗಬೇಕಾಗಿದೆ.

- Advertisement -
- Advertisement -
- Advertisement -

Latest article