ಕನಸಿನಲ್ಲೂ ಇಂತಹ ಸಾವು ನಿರೀಕ್ಷಿಸಲು ಸಾಧ್ಯವಿಲ್ಲ. ಚಾಲಕನ ನಿಯಂತ್ರಣ ತಪ್ಪಿದ ಲಾರಿಯ ಚಕ್ರ ಒಂದು ಸುತ್ತು ಸಾಗಿದ್ರೆ ಅಪಾಯ ಬರುತ್ತಿರಲಿಲ್ಲ. ( Mangalore Accident )
ಮಂಗಳೂರು : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಓಮ್ನಿ ಕಾರಿನ ಮೇಲೆ ಬಿದ್ದ ಪರಿಣಾಮ ( Mangalore Accident) ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ನಡೆದಿದೆ.
ಉಡುಪಿ ಕಡೆಗೆ ಹೋಗುತ್ತಿದ್ದ ಲೋಡ್ ತುಂಬಿದ ಲಾರಿ ಹೊನ್ನಕಟ್ಟೆ ಸಿಗ್ನಲ್ ಬಲಿ ಬರುತ್ತಿದ್ದಂತೆ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಲಾರಿ ಎಡ ಭಾಗಕ್ಕೆ ಮಗುಚಿ ಓಮ್ನಿ ಮೇಲೆ ಬಿದ್ದಿದೆ. ಪರಿಣಾಮ ಓಮ್ನಿಯಲ್ಲಿದ್ದ ಲೋಕೇಶ್ ಅನ್ನುವವರು ಸಿಲುಕಿ ಹಾಕಿಕೊಂಡಿದ್ದಾರೆ. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಲೋಕೇಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಲೋಕೇಶ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ : zee news Rohit Ranjan : ಝೀ ನ್ಯೂಸ್ Anchor ಬಂಧಿಸಲು 2 ರಾಜ್ಯದ ಪೊಲೀಸರ ನಡುವೆ ಕಿತ್ತಾಟ
ಮೃತ ಲೋಕೇಶ್ ಅವರು ಕುಳಾಯಿ ಗೋಕುಲ ನಗರ ನಿವಾಸಿ ಎಂದು ಗೊತ್ತಾಗಿದೆ. ಘಟನೆ ಸಂಬಂಧ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಮೆಜಾನ್ ನಲ್ಲಿ ಉದ್ಯೋಗವಕಾಶ : ತಿಂಗಳಿಗೆ 26 ಸಾವಿರ ರೂ ಸಂಬಳ : ಮಂಗಳೂರಿನವರಿಗೆ ಅವಕಾಶ
100 ಡೆಲಿವರಿ ಬಾಯ್ ಗಳನ್ನು ನೇಮಿಸಿಕೊಳ್ಳುವ ಸಲುವಾಗಿ ( amazon job) ಅಮೆಜಾನ್ ಸಂಸ್ಥೆ ಸಂದರ್ಶನಕ್ಕೆ ಆಹ್ವಾನ ನೀಡಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ನಿರುದ್ಯೋಗಿ ಯುವಕರಿಗೆ ಇದೀಗ ಉದ್ಯೋಗದ ಅವಕಾಶವೊಂದು ಬಂದಿದೆ. ಅಮೆಜಾನ್ ಸಂಸ್ಥೆ ನೂರು ಡೆಲಿವರಿ ಬಾಯ್ ಗಳನ್ನು ( amazon job ) ಜಿಲ್ಲೆಯಲ್ಲಿ ನೇಮಿಸಿಕೊಳ್ಳಲು ಮುಂದಾಗಿದ್ದು, ಈ ಹುದ್ದೆಗಳಿಗೆ ಜುಲೈ 12 ರಂದು ಮಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ. ಈ ಬಗ್ಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಜುಲೈ 12 ರಂದು ಮಂಗಳೂರಿನ ಉರ್ವಾ ಮಾರುಕಟ್ಟೆಯ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿದೆ.
ಮಾಹಿತಿಗಳ ಪ್ರಕಾರ ಡೆಲಿವರಿ ಬಾಯ್ ( amazon delivery boy) ಹುದ್ದೆಗೆ 26 ಸಾವಿರ ವೇತನವಿದ್ದು, ( ಅದಕ್ಕೆ ಇರುವ ನಿಬಂಧನೆಗಳು ಸಂದರ್ಶನ ಸಮಯದಲ್ಲಿ ಗೊತ್ತಾಗಲಿದೆ) ಯಾವುದೇ ವಿದ್ಯಾರ್ಹತೆ ಉಳ್ಳವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಉದ್ಯೋಗಾಕಾಂಕ್ಷಿಗಳು, ದ್ವಿಚಕ್ರ ವಾಹನ ಪರವಾನಿಗೆ, ಪಾನ್ ಕಾರ್ಡ್, ಬ್ಯಾಂಕ್ ಖಾತೆ, ಅಂಡ್ರಾಯಿಡ್ ಸ್ಮಾರ್ಟ್ ಫೋನ್ ಹೊಂದಿರಬೇಕಾಗುತ್ತದೆ. ಈ ಎಲ್ಲಾ ದಾಖಲೆಗಳ ಜೊತೆಗೆ ಬೇರೆ ದಾಖಲೆಗಳನ್ನು ಸಂದರ್ಶನದಂದು ಒಯ್ಯುವಂತೆ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : Hanuman Chalisa Madhya Pradesh : ಹಿಂದೂಸ್ತಾನದಲ್ಲಲ್ಲದೆ ಮತ್ತೆಲ್ಲಿ ಹನುಮಾನ್ ಚಾಲೀಸಾ ಪಠಿಸಬೇಕು : ಮಧ್ಯಪ್ರದೇಶ ಗೃಹ ಸಚಿವ
Discussion about this post