ಹನುಮಾನ್ ಚಾಲೀಸಾ ( Hanuman Chalisa Madhya Pradesh ) ಪಠಿಸಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ ಕಾಲೇಜೊಂದರ ವಿರುದ್ಧ ಮಧ್ಯಪ್ರದೇಶ ಸರ್ಕಾರ ಗರಂ ಆಗಿದೆ
HIGHLIGHTS
- ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಘಟನೆ
- ಅನುಮತಿಯಿಲ್ಲದೆ ಹಾಸ್ಟೆಲ್ ನಲ್ಲಿ ಹನುಮಾನ್ ಚಾಲೀಸಾ – Hanuman Chalisa ಕಾರ್ಯಕ್ರಮ ಆಯೋಜನೆ
- ಏಳು ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ದಂಡ
ಭೋಪಾಲ್ : ಅನುಮತಿ ಇಲ್ಲದೆ ಭೋಪಾಲ್ ನ ಕಾಲೇಜೊಂದರ ಹಾಸ್ಟೆಲ್ ನಲ್ಲಿ ( Hanuman Chalisa Madhya Pradesh ) ಹನುಮಾನ್ ಚಾಲೀಸಾ ಪಠಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿರುವ ಬಗ್ಗೆ ಮಧ್ಯಪ್ರದೇಶ ಸರ್ಕಾರ ಗರಂ ಆಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ದಂಡ ವಿಧಿಸಬಾರದು ಎಂದು ಸೂಚಿಸಿದ್ದು ಮಾತ್ರವಲ್ಲದೆ, ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದೆ.
ಭೋಪಾಲ್ ನಿಂದ 60 ಕಿಲೋ ಮೀಟರ್ ದೂರದಲ್ಲಿರುವ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಅನುಮತಿಯಿಲ್ಲದೆ ಹಾಸ್ಟೆಲ್ ನಲ್ಲಿ ಹನುಮಾನ್ ಚಾಲೀಸಾ ( Hanuman Chalisa ) ಕಾರ್ಯಕ್ರಮ ಆಯೋಜನೆ ಮಾಡಿದ್ದರ ವಿರುದ್ಧ ಕಾಲೇಜು ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿತ್ತು. ಏಳು ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ದಂಡವನ್ನೂ ವಿಧಿಸಿ ಎಚ್ಚರಿಕೆ ನೀಡಲಾಗಿತ್ತು.
ಇದನ್ನೂ ಓದಿ : Kalasipalyam police suspended : ಬಾಂಬೆ ಸಲೀಂ ವಿರುದ್ಧ ಕ್ರಮ ಕೈಗೊಳ್ಳಲು ಉದಾಸೀನ : ಕಲಾಸಿಪಾಳ್ಯ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು
ಯಾವಾಗ ಈ ವಿಷಯ ರಾಜ್ಯ ಸರ್ಕಾರಕ್ಕೆ ತಲುಪಿತೋ, ಕಾಲೇಜು ಆಡಳಿತ ಮಂಡಳಿ ನಡೆಗೆ ಸರ್ಕಾರದಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿರುವ ಮಧ್ಯಪ್ರದೇಶ ( Madhya Pradesh ) ಗೃಹ ಸಚಿವ ನರೋತ್ತಮ್ ಮಿಶ್ರಾ, ( narottam Mishra) ಹಿಂದೂಸ್ಥಾನದಲ್ಲಿ ಅಲ್ಲದೆ ಮತ್ತೆ ಎಲ್ಲಿ ಹನುಮಾನ್ ಚಾಲೀಸಾ ಪಠಿಸಬೇಕು ಎಂದು ಪ್ರಶ್ನಿಸಿದ್ದಾರೆ. ದಂಡ ವಿಧಿಸದಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿರುವ ಸಚಿವರು, ಮೊದಲು ವಿದ್ಯಾರ್ಥಿಗಳಿಗೆ ತಿಳಿ ಹೇಳಿ. ಅವರಲ್ಲಿ ಅರಿವು ಮೂಡಿಸಿ ಅಂದಿದ್ದಾರೆ.
ಇಲ್ಲಿ ಹನುಮಾನ್ ಚಾಲೀಸಾ ಪಠಿಸಿರುವುದಕ್ಕೆ ವಿರೋಧ ವ್ಯಕ್ತವಾಗಿಲ್ಲ. ಬದಲಾಗಿ ಶಬ್ಧದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಕೆಲ ವಿದ್ಯಾರ್ಥಿಗಳ ಪೋಷಕರು ದೂರು ನೀಡಿದ್ದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಕಬ್ಬಿಣದ ಸರಳು ತುಂಬಿದ ಲಾರಿಗೆ ಉಜ್ಜಿದ ತಮಿಳುನಾಡು ಸಾರಿಗೆ ಬಸ್ : ಸ್ಥಳದಲ್ಲೇ ಆರು ಮಂದಿ ಸಾವು
ಅಪಘಾತದ ಭೀಕರತೆ ( tamil nadu bus accident) ಎಷ್ಟಿತ್ತು ಅಂದ್ರೆ ಸೀಟ್ ನಲ್ಲಿ ಕೂತಿದ್ದ ಮಂದಿ ಕೂತಲ್ಲೇ ಜಜ್ಜಿದ ಪರಿಣಾಮ ಮೃತಪಟ್ಟಿದ್ದಾರೆ.
HIGHLIGHTS
- ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಬಸ್
- ದುರ್ಘಟನೆಯಲ್ಲಿ ಆರು ಮಂದಿ ಸಾವು 10 ಮಂದಿಗೆ ಗಾಯ
- ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
ಚೆನೈ : ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಬಸ್ ( Tamil Nadu State Transport Corporation -TNSTC) ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅಮಾಯಕ ಆರು ಜೀವಗಳು ಶುಕ್ರವಾರ ಪ್ರಾಣ ಕಳೆದುಕೊಂಡಿದೆ. ಶುಕ್ರವಾರ ಮುಂಜಾನೆ ( JULY 8 ) ಚೆನೈ ( Chennai) ನಿಂದ ಚಿದಂಬರಂಗೆ ( Chidambaram )ಹೊರಟಿದ್ದ ಬಸ್ ನಲ್ಲಿ ಒಟ್ಟು 50 ಜನ ಪ್ರಯಾಣಿಕರಿದ್ದರು. ಚೆನೈ – ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ( Chennai-Trichy National Highway ) ಸಾಗುತ್ತಿದ್ದ ಬಸ್ ಚೆಂಗಲಪಟ್ಟು ಜಿಲ್ಲೆಯ ಆಚರಪಕ್ಕಂ ತಲುಪುತ್ತಿದ್ದಂತೆ ಬಸ್ ಚಾಲಕ ಎದುರುಗಡೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಿದ್ದಾನೆ. ಈ ವೇಳೆ ಚಾಲಕನ ತಪ್ಪು ನಿರ್ಧಾರದಿಂದ ಎಡ ಭಾಗ ಸಂಪೂರ್ಣವಾಗಿ ಲಾರಿಗೆ ಉಜ್ಜಿಕೊಂಡು ಹೋಗಿದೆ.
ಲಾರಿಯಲ್ಲಿ ಕಬ್ಬಿಣದ ಸರಳುಗಳಿದ್ದ ಕಾರಣ, ವೇಗವಾಗಿ ಬಸ್ ನುಗ್ಗಿದ ಪರಿಣಾಮ ಸರಳುಗಳು ಬಸ್ ನೊಳಗೆ ತೂರಿಕೊಂಡಿದೆ. ಅಪಘಾತದ ಪರಿಣಾಮ ಹೇಗಿತ್ತು ಅಂದ್ರೆ ಬಸ್ ನ ಎಡ ಭಾಗವೇ ಭಾಗವೇ ಕಿತ್ತುಕೊಂಡು ಹೋಗಿದೆ. ಮಾತ್ರವಲ್ಲದೆ ಅನೇಕ ಪ್ರಯಾಣಿಕರ ದೇಹಗಳು ನಜ್ಜುಗುಜ್ಜಾಗಿದೆ.
ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಂಬ್ಯುಲೆನ್ಸ್ ಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆದರೆ ಡಿಕ್ಕಿ ರಭಸಕ್ಕೆ 6 ಮಂದಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರು. 10 ಮಂದಿಗೆ ಗಾಯವಾಗಿದ್ದು, ಆ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಇದೀಗ ಗಾಯಗೊಂಡ ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Discussion about this post