ಕೋಲ್ಕತಾ : ಕೇಂದ್ರದೊಂದಿಗೆ ಸದಾ ತಿಕ್ಕಾಟ ನಡೆಸುತ್ತಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿದ್ದಾರೆ. ದೇಶದ ಎಲ್ಲಾ ರಾಜ್ಯ ಮಟ್ಟದ ವಿವಿಗಳಿಗೆ ಆಯಾ ರಾಜ್ಯದ ರಾಜ್ಯಪಾಲರು ಕುಲಾಧಿಪತಿಗಳಾಗಿರುತ್ತಾರೆ.
ಆದರೆ ಪಶ್ಚಿಮಬಂಗಾಳ ಸರ್ಕಾರ ರಾಜಭವನದೊಂದಿಗಿನ ಕಿರಿಕ್ ಅನ್ನುವ ಮುಂದುವರಿಸಿದ್ದು, ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯಪಾಲರ ಬದಲು ರಾಜ್ಯದ ಮುಖ್ಯಮಂತ್ರಿಯನ್ನೇ ಕುಲಾಧಿಪತಿಯನ್ನಾಗಿ ನೇಮಿಸಲು ನಿರ್ಧರಿಸಿದೆ. ಈ ಸಂಬಂಧ ಪಶ್ಚಿಮ ಬಂಗಾಳ ವಿಧಾನಸಭೆ ಮಸೂದೆಯನ್ನು ಅಂಗೀಕರಿಸಿದೆ.
ಇದಕ್ಕೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕರ ನಡೆಯನ್ನು ಖಂಡಿಸಿರುವ ರಾಜ್ಯ ಶಿಕ್ಷಣ ಸಚಿವ ಬ್ರತ್ಯಾ ಬಸು, ಕೇಂದ್ರಿಯ ವಿಶ್ವವಿದ್ಯಾನಿಲಯಗಳಿಗೆ ಪ್ರಧಾನಿ ಕುಲಪತಿಗಳಾಗಿರುವಾಗ ರಾಜ್ಯ ವಿವಿಗೆ ಮುಖ್ಯಮಂತ್ರಿ ಕುಲಾಧಿಪತಿ ಯಾಕಾಗಬಾರದು ಎಂದು ಪ್ರಶ್ನಿಸಿದ್ದಾರೆ.
ಆದರೆ ಈ ಮಸೂದೆ ಜಾರಿಯಾಗಬೇಕಾದರೆ ರಾಜ್ಯಪಾಲರ ಅಂಕಿತಬೇಕಾಗುತ್ತದೆ. ತಮ್ಮ ಅಧಿಕಾರವನ್ನೇ ಕಿತ್ತುಕೊಳ್ಳುವ ಮಸೂದೆಗೆ ರಾಜ್ಯಪಾಲ ಜಗದೀಪ್ ಧನಕರ್ ಸಹಿ ಹಾಕುತ್ತಾರೆಯೇ ಅನ್ನುವುದು ಈಗಿರುವ ಪ್ರಶ್ನೆ.
Discussion about this post