ಸುಪ್ರೀಂಕೋರ್ಟ್ ತೀರ್ಪು ಉದ್ಧವ್ ಬಣಕ್ಕೆ ನಿರಾಶಿ ತಂದಿದೆ. ಹೀಗಾಗಿ ಶಿಂಧೆ ಹೊಡೆತ ತಾಳಲಾರದೆ ಸೋಲು ಒಪ್ಪಿಕೊಂಡಿದ್ದಾರೆ
ಮುಂಬೈ : ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ನಡೆದ ಸುದೀರ್ಘ ಅವಧಿಯ ಹೈಡ್ರಾಮ, ಸಿಎಂ ಉದ್ದವ್ ಠಾಕ್ರೆ ರಾಜೀನಾಮೆಯೊಂದಿಗೆ ಒಂದು ಹಂತಕ್ಕೆ ಬಂದು ನಿಂತಿದೆ. ಈ ಮೂಲಕ ಕಳೆದ ಹತ್ತು ದಿನಗಳಿಂದ ರಾಜಕೀಯ ಅಸ್ಥಿರತೆಗೆ ಸಿಲುಕಿದ್ದ ಮಹಾ ವಿಕಾಸ ಆಘಾಡಿ ಸರ್ಕಾರ ಪತನಗೊಂಡಿದೆ.
ನಾಳೆ ಅಂದರೆ ಗುರುವಾರ ವಿಶ್ವಾಸಮತ ಯಾಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಕೆಲವೇ ಹೊತ್ತಿನಲ್ಲಿ ವಿದಾಯ ಭಾಷಣ ಮಾಡಿರುವ ಉದ್ಧವ್ ಠಾಕ್ರೆ ತಮ್ಮ ರಾಜೀನಾಮೆ ನಿರ್ಧಾರವನ್ನು ಘೋಷಿಸಿದ್ದಾರೆ. ಜೊತೆಗೆ ರಾಜೀನಾಮೆ ಪತ್ರವನ್ನು ರಾಜಭವನಕ್ಕೆ ಕಳುಹಿಸಿಕೊಡಲಾಗಿದ್ದು, ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಈ ಮೂಲಕ ಎರಡೂವರೆ ವರ್ಷದ ಶಿವಸೇನೆ- ಕಾಂಗ್ರೆಸ್ -ಎನ್ ಸಿಪಿ ನೇತೃತ್ವದ ವಿಕಾಸ ಅಘಾಡಿ ಸರಕಾರ ಪತನಗೊಂಡಿದೆ. ಅಘಾಡಿ ಸರಕಾರ ಪತನಗೊಂಡ ಬೆನ್ನಿಗೇ ಹೊಸ ಸರಕಾರ ರಚನೆಗೆ ಹಕ್ಕು ಮಂಡಿಸಲು ಬಿಜೆಪಿಯ ಪಡ್ನವೀಸ್ ಮುಂದಾಗಿದ್ದಾರೆ. ಶಿಂಧೆ ಬಣದ ಶಾಸಕರ ಬೆಂಬಲಿಗರ ಪಟ್ಟಿಯೊಂದಿಗೆ ಸರ್ಕಾರ ರಚನೆಗೆ ಅವರು ಹಕ್ಕು ಮಂಡಿಸುವ ಸಾಧ್ಯತೆ ಇದೆ.
ಎರಡೂವರೆ ವರ್ಷಗಳ ಕಾಲ ಶಿವಸೇನೆ – ಕಾಂಗ್ರೆಸ್ – ಎನ್ಸಿಪಿ ಜೊತೆಯಾಗಿ ಸರ್ಕಾರ ನಡೆಸಿತ್ತು. ಕಟ್ಟಾ ಹಿಂದುತ್ವವಾದಿ ಶಿವಸೇನೆ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿದಾಗಲೇ ಈ ಸರ್ಕಾರದ ಭವಿಷ್ಯದ ಬಗ್ಗೆ ಅನುಮಾನ ಎದ್ದಿತ್ತು. ಆದರೆ ಶಿವಸೇನೆಯಲ್ಲೇ ಬಂಡಾಯ ಎದ್ದೇಳುವ ನಿರೀಕ್ಷೆ ಯಾರಲ್ಲೂ ಇರಲಿಲ್ಲ.
Discussion about this post