ಮಧ್ಯಪ್ರದೇಶ : ಈಗಾಗಲೇ ಜಾರಿಯಲ್ಲಿರುವ ಕೊರೋನಾ ಲಸಿಕೆಯನ್ನು ಯಾವುದೇ ಕಾರಣಕ್ಕೂ 18 ವರ್ಷದಿಂದ ಕೆಳಗಿನವರಿಗೆ ಕೊಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ. ಮಾತ್ರವಲ್ಲದೆ ಲಸಿಕೆ ತಯಾರಿಸಿದ ಕಂಪನಿಗಳು ಕೂಡಾ ವಯಸ್ಕರಿಗೆ ಮಾತ್ರ ಲಸಿಕೆ ನೀಡಬೇಕು ಎಂದು ತಿಳಿಸಿದೆ.
ಈ ನಡುವೆ ಮಧ್ಯಪ್ರದೇಶ ಮೊರೆನಾ ಜಿಲ್ಲೆಯ ಅಂಬಾ ತಹಸಿಲ್ ನ ಬಾಗ್ ಕಾ ಪುರ ಪ್ರದೇಶದಲ್ಲಿ 16 ವರ್ಷದ ಹುಡುಗನೊಬ್ಬನಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಮೊರೆನಾ ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿರುವ ಲಸಿಕಾ ಕೇಂದ್ರದಲ್ಲಿ ಕಮಲೇಶ್ ಕುಶ್ವಹಾ ಅವರ ಪುತ್ರ ಪಿಲ್ಲು ಎಂಬಾತನಿಗೆ ಲಸಿಕೆ ಚುಚ್ಚಲಾಗಿದೆ.
ಲಸಿಕೆ ಪಡೆದ ಕೆಲವೇ ಕ್ಷಣದಲ್ಲಿ ಬಾಲಕನಿಗೆ ತಲೆ ತಿರುಗಲಾರಂಭಿಸಿದೆ. ಜೊತೆಗೆ ಬಾಯಿಯಿಂದ ನೊರೆ ಬರಲಾರಂಭಿಸಿದೆ. ತಕ್ಷಣ ಬಾಲಕನನ್ನು ಹೆಚ್ಚಿನ ಚಿಕಿತ್ಸೆ ಸಲುವಾಗಿ ಗ್ವಾಲಿಯರ್ ಗೆ ಕಳುಹಿಸಲಾಗಿದೆ. ಇದೀಗ 16 ವರ್ಷದ ಬಾಲಕನಿಗೆ ಲಸಿಕೆ ನೀಡಿರುವ ಬಗ್ಗೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಮಾಹಿತಿಗಳ ಪ್ರಕಾರ ಕಮಲೇಶ್ ಕುಶ್ವಹಾ ಲಸಿಕೆ ಪಡೆಯಲು ಮಗನೊಂದಿಗೆ ಆಗಮಿಸಿದ್ದರು. ಈ ವೇಳೆ ಆರೋಗ್ಯ ಸಿಬ್ಬಂದಿ ಪಿಲ್ಲು ಲಸಿಕೆ ಪಡೆಯಲು ಬಂದಿದ್ದಾನೆ ಎಂದು ಭಾವಿಸಿ ಲಸಿಕೆ ಚುಚ್ಚಿದ್ದಾರೆ ಎನ್ನಲಾಗಿದೆ.
Discussion about this post