ನವದೆಹಲಿ : ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗಾಗಿ ಜನಸಾಮಾನ್ಯರು ದಿನದೂಡುವುದೇ ಕಷ್ಟವಾಗಿದೆ. ಪ್ರತಿಯೊಂದು ವಸ್ತುವಿನ ದರ ಏರಿದರೆ ಅದರ ನೇರ ಪರಿಣಾಮವಾಗುವುದು ಮಾತ್ರ ಬಡವರ ಬದುಕಿನ ಮೇಲೆ
ಈಗಾಗಲೇ ಅಡುಗೆ ಅನಿಲದ ದರ ಏರಿಕೆಯಾಗಿದ್ದು, ಅದರಲ್ಲೂ ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ಮನೆ ತಲುಪುವ ಹೊತ್ತಿಗೆ ಸಾವಿರ ರೂಪಾಯಿಯಾಗಿರುತ್ತದೆ. ಮತ್ತೊಂದು ಕಡೆ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನೂ ಕೂಡಾ ಕೇಂದ್ರ ಸರ್ಕಾರ ಏರಿಸಿದ್ದು, ಈ ಮೂಲಕ ತಿಂಗಳ ಮೊದಲ ದಿನವೇ ಶಾಕ್ ಕೊಟ್ಟಿದೆ.
ಅರೇ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಯಾದ್ರೆ ಜನಸಾಮಾನ್ಯರಿಗೇನು ಸಂಕಷ್ಟ ಎಂದು ಪ್ರಶ್ನಿಸಿಬೇಡಿ, ಅಕ್ಟೋಬರ್ ಮೊದಲ ದಿನ ಪೆಟ್ರೋಲಿಯಂ ಕಂಪನಿಗಳು ಅನಿಲದ ಬೆಲೆಯನ್ನು 43.5 ರೂಪಾಯಿ ಹೆಚ್ಚಿಸಿರುವ ಪರಿಣಾಮ ರೆಸ್ಟೋರೆಂಟ್, ದಾಬಾ ಮತ್ತು ಹೊಟೇಲ್ ಗಳಲ್ಲಿ ಆಹಾರದ ಬೆಲೆ ತುಟ್ಟಿಯಾಗಲಿದೆ.
ಇನ್ನು ಹೊಸ ದರ ಪಟ್ಟಿಯ ಪ್ರಕಾರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ 1736.5 ರೂ ಆಗಿರಲಿದೆ. ಈ ಹಿಂದೆ 1693 ರೂಪಾಯಿಗೆ ಒಂದು ಸಿಲಿಂಡರ್ ದೊರೆಯುತ್ತಿದ್ದು, ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1805.5 ರೂ.ಗೆ ಏರಿಕೆಯಾಗಿದೆ.
Discussion about this post