ಶಿವನಿಗೆ 10 ಕೆಜಿ ಐಸ್ ಕ್ರೀಂ ಪಾಲಕೋಲಿನ ದೇವಲ್ಲ ನರಸಿಂಹಮೂರ್ತಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಇನ್ನು ಭಕ್ತರು ಪ್ರಸಾದ ರೂಪದಲ್ಲಿ ಸಿಕ್ಕ ಐಸ್ ಕ್ರೀಂ ಸವಿದು ಬಾಯಿ ಚಪ್ಪರಿಸಿದ್ದಾರೆ.
ಹೈದರಾಬಾದ್ : ಅಭಿಷೇಕ ಪ್ರಿಯ ಅನ್ನಿಸಿಕೊಂಡ ಶಿವನಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪ, ನೀರು, ಜೇನು ತುಪ್ಪ ಸಕ್ಕರೆ ಹೀಗೆ ಅಭಿಷೇಕ ಮಾಡುವುದನ್ನು ಕೇಳಿದ್ದೇವೆ ನೋಡಿದ್ದೇವೆ. ಆದರೆ ಶಿವನಿಗೆ ಐಸ್ ಕ್ರೀಂ ಅಭಿಷೇಕ ಮಾಡಿರುವುದನ್ನು ಕೇಳಿದ್ದೀರಾ. ಇದೀಗ ಅದು ಕೂಡಾ ನಡೆದು ಹೋಗಿದೆ.
ಆಂಧ್ರಪ್ರದೇಶದ ಪಾಲಕೋಲ್ ನ ಪಂಚರಾಮ ಕ್ಷೇತ್ರಗಳಲ್ಲಿ ಒಂದು ಎಂದು ಕರೆಸಿಕೊಂಡಿರುವ ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವನಿಗೆ ಐಸ್ ಕ್ರೀಂ ಅಭಿಷೇಕ ನೆರವೇರಿಸಲಾಗಿದೆ. ಪಾಲಕೋಲಿನ ದೇವಲ್ಲ ನರಸಿಂಹಮೂರ್ತಿ ಅನ್ನುವವರು ಈ ಸಲುವಾಗಿ 10 ಕೆಜಿ ಐಸ್ ಕ್ರೀಂ ಅನ್ನು ದೇವರಿಗೆ ಸಮರ್ಪಿಸಿದ್ದಾರೆ.
ಇದೀಗ ಈ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ದೇವರಿಗಿಂತ ನರಸಿಂಹ ಮೂರ್ತಿ ಸುದ್ದಿಯಲ್ಲಿದ್ದಾರೆ. ಈಗ ಐಸ್ ಕ್ರೀಂ ಅಭಿಷೇಕ ನೆರವೇರಿದೆ. ಮುಂದೆ ತಂಪು ಪಾನೀಯ, ಕೋಲ, ಪೆಪ್ಸಿ ಅಭಿಷೇಕ ನೆರವೇರಿದರೂ ಅಚ್ಚರಿ ಇಲ್ಲ.
ಅರಬರ ನಾಡಿನಲ್ಲಿ ಒಂಟೆಗೂ ಸೌಂದರ್ಯ ಸ್ಪರ್ಧೆ : ನಿಯಮ ಮೀರಿದ್ರೆ ದಂಡವೂ ಉಂಟು
ದುಬೈ : ಇತ್ತೀಚಿನ ವರ್ಷಗಳಲ್ಲಿ ಕ್ಯಾಟ್ ವಾಕ್, ಸೌಂದರ್ಯ ಸ್ಪರ್ಧೆ ಅನ್ನುವುದು ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಪ್ರಾಣಿಗಳಿಗೂ ಸೌಂದರ್ಯ ಸ್ಪರ್ಧೆಗಳು ಶುರುವಾಗಿದೆ. ನಾಯಿ, ಬೆಕ್ಕು, ಕೋಳಿ ಹೀಗೆ ತಮ್ಮ ನೆಚ್ಚಿನ ಪ್ರಾಣಿ ಪಕ್ಷಿಗಳನ್ನು ತಂದು ಪ್ರದರ್ಶಿಸಿ ಬಹುಮಾನ ಗಿಟ್ಟಿಸುವ ಮಂದಿ ಸಾಕಷ್ಟಿದ್ದಾರೆ.
ಹೀಗೆ ಇಂತಹುದೇ ಸ್ಪರ್ಧೆ ಸೌದಿ ಆರೇಬಿಯಾದಲ್ಲಿ ಆಯೋಜಿಸಲಾಗುತ್ತದೆ. ಹೇಳಿ ಕೇಳಿ ಅರಬರ ನಾಡಿನಲ್ಲಿ ಬಿಸಿಲು ಮತ್ತು ಮರಳು ಯಥೇಚ್ಛವಾಗಿದೆ. ಈ ಕಾರಣದಿಂದ ಒಂಟೆಗಳು ಇಲ್ಲಿ ಜೀವನದ ಭಾಗವಾಗಿಯೇ ಹೋಗಿದೆ. ಹಾಗಂತ ಇಲ್ಲಿ ಒಂಟೆಗಳನ್ನು ಅಗತ್ಯಕ್ಕಾಗಿ ಮಾತ್ರ ಸಾಕುತ್ತಿಲ್ಲ, ಬದಲಾಗಿ ಶೋಕಿಗಾಗಿಯೂ ಒಂಟೆ ಸಾಕುವವರಿದ್ದಾರೆ.
ಹೀಗೆ ಶೋಕಿಗಾಗಿ ಒಂಟೆ ಸಾಕಿದವರೇ ಸೇರಿ ಸೌದಿ ಅರೇಬಿಯಾದಲ್ಲಿ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವ ಆಯೋಜಿಸಲಾಗುತ್ತದೆ. ಒಂಟೆ ಬ್ರೀಡರ್ ಗಳು ತಮ್ಮ ಒಂಟೆಗಳೊಂದಿಗೆ ಸ್ಪರ್ಧೆಗೆ ಆಗಮಿಸುತ್ತಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 66 ಮಿಲಿಯನ್ ಡಾಲರ್ ಬಹುಮಾನವೂ ಸಿಗುತ್ತದೆ. ಒಂಟೆಗಳ ತಲೆ, ಕುತ್ತಿಗೆ, ಡುಬ್ಬ, ಉಡುಗೆ ಮತ್ತು ಭಂಗಿಗಳ ಆಕಾರದ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಹಾಗಂತ ಒಂಟೆಗಳು ನೈಸರ್ಗಿಕವಾಗಿಯೇ ಸೌಂದರ್ಯವಾಗಿ ಕಾಣಬೇಕು. ಅದನ್ನು ಹೊರತುಪಡಿಸಿ ಚುಚ್ಚುಮದ್ದು ಸೇರಿದಂತೆ ಅಡ್ಡ ಮಾರ್ಗದ ಮೂಲಕ ಒಂಟೆಯ ಸೌಂದರ್ಯ ಹೆಚ್ಚಿಸಿದ್ರೆ ಸ್ಪರ್ಧೆಯಿಂದ ಗೇಟ್ ಪಾಸ್ ನೀಡಲಾಗುತ್ತದೆ. ಮಾತ್ರವಲ್ಲದೆ ದೊಡ್ಡ ಮೊತ್ತದ ದಂಡವನ್ನೂ ವಿಧಿಸಲಾಗುತ್ತದೆ.
ಅಂದ ಹಾಗೇ ಸೌದಿಯ ರಾಜಧಾನಿ ರಿಯಾದ್ನ ಈಶಾನ್ಯ ಮರುಭೂಮಿಯಲ್ಲಿ ಈ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಿರುವ ಒಂಟೆಯ ಸ್ಪರ್ಧೆಯಿಂದ ಈಗಾಗಲೇ 40 ಒಂಟೆಗಳಿಗೆ ಗೇಟ್ ಪಾಸ್ ನೀಡಲಾಗಿದೆ.
ಇನ್ನು ಭಾರತದಲ್ಲೂ ಇಂತಹುದೇ ಸ್ಪರ್ಧೆ ನಡೆಯುತ್ತದೆ. ರಾಜಸ್ತಾನದಲ್ಲಿ ಕಾರ್ತಿಕ ಹುಣ್ಣಿಮೆಯಂದು ಆಚರಿಸುವ ಪುಷ್ಕರ್ ಮೇಳದಲ್ಲಿ ಒಂಟೆಗಳ ಶೃಂಗಾರ ನೋಡುವುದೇ ಕಣ್ಣಿಗೆ ಹಬ್ಬ. ಹೆಚ್ಚು ಕಡಿಮೆ ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ನಡೆಯುವ ಪುಷ್ಕರ್ ಮೇಳ ದೇಶದ ಅತ್ಯಂತ ಹಳೆಯ ಪಶು ಮೇಳ ಎಂದು ಕರೆಸಿಕೊಂಡಿದೆ.
Discussion about this post