ಹಲವು ಕಡೆ ದಾಳಿ ನಡೆದ ವೇಳೆ ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಪೊಲೀಸರು ಗೋದಾಮಿನಲ್ಲಿ ತುಂಬಿಸಿಟ್ಟಿದ್ದರು. ಆದರೆ ಗೋದಾಮಿನಿಂದ ಎಣ್ಣೆ ಬಾಟಲಿ ( liquor theft ) ನಾಪತ್ತೆಯಾಗುತ್ತಿರುವುದು ತಲೆನೋವಿಗೆ ಕಾರಣವಾಗಿತ್ತು.
ಗುಜರಾತ್ : ರಾಜ್ಯದ ಜಾಮ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಕಳೆದ ಒಂದು ವರ್ಷದಿಂದ ಹೊಸ ತಲೆನೋವು ಶುರುವಾಗಿತ್ತು. ಗೋದಾಮಿನಲ್ಲಿ ಸಂಗ್ರಹಿಸಿಟ್ಟುರವ ಮದ್ಯದ ಬಾಟಲಿಗಳು ( liquor theft ) ನಾಪತ್ತೆಯಾಗುತ್ತಿರುವುದು ಹೊಸ ಸಮಸ್ಯೆ ಸೃಷ್ಟಿಸಿತ್ತು. ಇಲಿ, ಹೆಗ್ಗಣಗಳು ಬಾಟಲಿ ಕದಿಯುತ್ತಿದೆಯೇ ಅನ್ನುವ ಅನುಮಾನವೂ ಕಾಡಿತ್ತು.
ಆದರೆ ಕೆಲ ದಿನಗಳ ಹಿಂದೆ ಮದ್ಯ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಚ್ಚರಿ ಅಂದ್ರೆ ಕಳ್ಳ ಬರೀ 13 ವರ್ಷದ ಹುಡುಗ. ವಿಚಾರಣೆ ನಡೆಸಿದರೆ ಹುಬ್ಬೇರಿಸುವ ಸರದಿ ಅಧಿಕಾರಿಗಳದ್ದು, ಕಳೆದ ಒಂದು ವರ್ಷದಿಂದ ಗೋದಾಮಿಗೆ ಕನ್ನ ಹಾಕುತ್ತಿದ್ದ ಪೋರ ಸದ್ದಿಲ್ಲದೆ ಎಣ್ಣೆ ಬಾಟಲಿಗಳನ್ನು ಎಸ್ಕೇಪ್ ಮಾಡುತ್ತಿದ್ದನಂತೆ.
ಇದನ್ನೂ ಓದಿ : ಸೋಮವಾರ ಮತ್ತೆ ಮಂಗಳೂರು ಮುಳುಗಲಿದೆಯೇ…. ಅಲರ್ಟ್ ಕೊಟ್ಟ ಹವಮಾನ ಇಲಾಖೆ
ಶನಿವಾರ ಬೆಳಗ್ಗೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಾಗ ಎರಡು ಬಿಯರ್ ಬಾಟಲಿಗಳು ಹುಡುಗನ ಕೈಯಲ್ಲಿತ್ತು. ಇದಾದ ಬಳಿಕ ಹುಡುಗ ವಾಸಿಸುತ್ತಿದ್ದ ಪೊಲೀಸ್ ಕ್ವಾರ್ಟರ್ಸ್ ಗೆ ಹೋಗಿ ನೋಡಿದರೆ 29 ಬಾಟಲಿ ಪ್ರೀಮಿಯಂ ವಿಸ್ಕಿ, 317 ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್, 7 ಟಿನ್ ಪ್ರೀಮಿಯಂ ಬಿಯರ್ ಗಳು ಸಿಕ್ಕಿತ್ತು. ಇವುಗಳ ಮೌಲ್ಯ 1.7 ಲಕ್ಷ ಎಂದು ಅಂದಾಜಿಸಲಾಗಿದೆ.
ಇದೀಗ ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಕಳ್ಳತನದ ಉದ್ದೇಶ ಅರಿಯಲು ಮುಂದಾಗಿದ್ದಾರೆ.
ಇದನ್ನು ಓದಿ : ಚಲಿಸುವ ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮೆಡಿಕಲ್ ವಿದ್ಯಾರ್ಥಿನಿ ಸಾವು
Assamese actor Kishor Das : ಕ್ಯಾನ್ಸರ್ ರೋಗಕ್ಕೆ ಬಲಿಯಾದ ಅಸ್ಸಾಂ ನ ಖ್ಯಾತ ನಟ
ಚೈನೈ : ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ರೋಗದೊಂದಿಗೆ ಹೋರಾಡುತ್ತಿದ್ದ ಅಸ್ಸಾಂ ನಟ ಕಿಶೋರ್ ದಾಸ್ ( Assamese actor Kishor Das) ಶನಿವಾರ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ. 30 ವರ್ಷದ Assamese actor Kishor Das ಚೆನೈ ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಇದೇ ಆಸ್ಪತ್ರೆಗೆ ಅವರು ದಾಖಲಾಗಿದ್ದರು ಅನ್ನಲಾಗಿದೆ.
ಇದನ್ನು ಓದಿ : ಪವಿತ್ರಾ ಲೋಕೇಶ್ ಮುಂದೆಯೇ ಪತ್ನಿ ಕೈಯ ಚಪ್ಪಲಿ ಸೇವೆ ತಪ್ಪಿಸಿಕೊಂಡ ನರೇಶ್
ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು ಅನ್ನಲಾಗಿದೆ. ಇನ್ನು ಕೊರೋನಾ Protocols ಕಾರಣದಿಂದ ಚೆನೈ ನಲ್ಲೇ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಇದಕ್ಕೂ ಮುನ್ನ ಅವರ ಮೃತ ದೇಹವನ್ನು ಅಸ್ಸಾಂಗೆ ತರುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ತಮಿಳುನಾಡು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಕೊರೋನಾ ನಿಯಮಗಳ ಕಾರಣದಿಂದ ಅದು ಸಾಧ್ಯವಾಗಲಿಲ್ಲ.
ಇದನ್ನು ಓದಿ : ಒಂದು ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ರಿಷಬ್ ಶೆಟ್ಟಿ
ಕಿಶೋರ್ ಅಸ್ಸಾಂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ನಿರೀಕ್ಷೆಗಳಿತ್ತು. ಜೊತೆಗೆ ಕಿರುತೆರೆಗಳಲ್ಲೂ ಸಾಕಷ್ಟು ಸಾಧನೆ ಮಾಡಿದ ಹಿರಿಮೆ ಇವರದ್ದು.
Discussion about this post