ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ರಹಸ್ಯ ಪ್ರೇಮಿ, ಮಾಜಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಅಲೈನಾ ಕಬಾಯೇನಾ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
36 ವರ್ಷದ ಅಲೈನಾ ಕಬಾಯೋನಾ ಜೊತೆ ವ್ಲಾದಿಮಿರ್ ಪುಟಿನ್ ಸಂಬಂಧ ಇಟ್ಟುಕೊಂಡಿದ್ದು ಇದರ ಪರಿಣಾಮ ಅಲೈನಾ ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇನ್ನು ಡೈಲಿ ಮೇಲ್ ಸಹ ವರದಿ ಮಾಡಿದ್ದು, ರಷ್ಯಾ ಗುಪ್ತಚರದಲ್ಲಿ ಕಬಾಯೋನಾ ಅವರು ಇಟಲಿಯ ವೈದ್ಯರ ನೆರವಿನಿಂದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬುದು ಬಹಿರಂಗಗೊಂಡಿದೆ ಎಂದು ತಿಳಿಸಿದೆ.
2013ರಲ್ಲಿ ಪುಟಿನ್ ಅವರು ಲೈಡ್ಮಿಲಾ ಶಕ್ರೆಬ್ನೆವಾ ಅವರ ಜೊತೆಗಿನ ತಮ್ಮ 30 ವರ್ಷದ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದರು. ಬಳಿಕ 2014ರಲ್ಲಿ ಅಲೈನಾ ಜೊತೆ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು.
Discussion about this post