ಮೈಸೂರು : ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ಟ್ವೀಟರ್ ಸಮರ ಒಂದು ಹಂತಕ್ಕೆ ಸ್ಥಗಿತಗೊಂಡಿದ್ದು, ಇದೀಗ ಮಾಧ್ಯಮಗಳಲ್ಲಿ ಪರಸ್ಪರ ಹೇಳಿಕೆ ನೀಡಲಾರಂಭಿಸಿದ್ದಾರೆ.
ಮೊನ್ನೆ ಮೊನ್ನೆ ಸಿದ್ದರಾಮಯ್ಯ ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡೋದಿಲ್ಲ ಅಂದಿದ್ದರು, ಆದರೆ ಆದ್ಯಾಕೋ ಅವರಿಗೆ ಮನಸ್ಸು ಕೇಳಲಿಲ್ಲ, ಮತ್ತೆ ವಾಗ್ದಾಳಿ ನಡೆಸಿದ್ದರು. ಕುಮಾರಸ್ವಾಮಿ ಬಗ್ಗೆ ಮಾತನಾಡದಿದ್ರೆ ಸಿದ್ದರಾಮಯ್ಯ ಅವರಿಗೆ ನಿದ್ದೆಯೇ ಬರೋದಿಲ್ಲ ಅನ್ನುವ ದಳಪತಿಗಳ ಹೇಳಿಕೆ ಅಲ್ಲಿಗೆ ಸ್ಪಷ್ಟವಾಗಿತ್ತು.
![siddaramaiah mng](https://torrentspree.com/wp-content/uploads/2021/02/siddaramaiah-mng.jpg)
ಈ ನಡುವೆ ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಪುಟಗೋಸಿ – ‘ಪುಟ್ಕೋಸಿ’ putgosi ಪದ ಬಳಸಿದ್ದಾರೆ.
ಅಧಿಕಾರಕ್ಕಾಗಿ ಎಷ್ಟು ಕುತಂತ್ರ ಮಾಡಿದ್ದೀರಿ ಅಂತಾ ಗೊತ್ತು, 23 ಶಾಸಕರ ಹೊಟ್ಟೆ ಮೇಲೆ ಹೊಡೆದವರು ನೀವು, ಪುಟ್ಕೋಸಿ ವಿಪಕ್ಷ ಸ್ಥಾನಕ್ಕಾಗಿ ಸರ್ಕಾರ ತೆಗೆದಿದ್ದು ಸಿದ್ದರಾಮಯ್ಯ,ಯಡಿಯೂರಪ್ಪ ಸರ್ಕಾರ ತರುವಲ್ಲಿ ನಿಮ್ಮ ಪಾತ್ರ ಎಷ್ಟಿದೆ ಅಂತಾ ನನಗೆ ಗೊತ್ತಿದೆ. ನನ್ನ ಬಗ್ಗೆ ನೀವು ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
Discussion about this post