ಕೇರಳ : 2020ರ ಆಗಸ್ಟ್ ತಿಂಗಳಲ್ಲಿ ನಡೆದ ಕಲ್ಲಿಕೋಟೆ ವಿಮಾನ ದುರಂತದ ತನಿಖಾ ವರದಿ ಬಹಿರಂಗಗೊಂಡಿದ್ದು, ಒಂದೇ ಒಂದು ವೈಪರ್ ದೋಷದಿಂದ ವಿಮಾನ ದುರಂತ ನಡೆಯಿತು ಅಂದಿದೆ. ವಿಮಾನ ಅಪಘಾತ ತನಿಖಾ ದಳ ಭಾನುವಾರ ವರದಿ ಬಿಡುಗಡೆ ಮಾಡಿದ್ದು,ವಿಮಾನದ ವೈಪರ್ ದೋಷ ಸೇರಿದಂತೆ ಹಲವು ಲೋಪಗಳನ್ನು ಬೊಟ್ಟು ಮಾಡಿದೆ.
2020ರ ಆಗಸ್ಟ್ 7 ರಂದು ದುಬೈನಿಂದ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ಸಂಸ್ಥೆಯ ಬಿ 737-800 ವಿಮಾನ ಕಲ್ಲಿಕೋಟೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿತ್ತು. ದುರ್ಘಟನೆಯಲ್ಲಿ 21 ಮಂದಿ ಮೃತಪಟ್ಟಿದ್ದರು. 165 ಮಂದಿಯನ್ನು ರಕ್ಷಿಸಲಾಗಿತ್ತು.

ಇನ್ನು 257 ಪುಟದ ತನಿಖಾ ವರದಿ ಪ್ರಕಾರ, ವಿಮಾನ ಪತನಕ್ಕೆ ಕೇವಲ ವೈಪರ್ ವೈಫಲ್ಯ ಮಾತ್ರವಲ್ಲದೆ, ಪೈಲೆಟ್ ನಿಗದಿಪಡಿಸಿದ ಕಾರ್ಯನಿರ್ವಹಣಾ ವಿಧಾನವನ್ನು ಲ್ಯಾಡಿಂಗ್ ಅವಧಿಯಲ್ಲಿ ಪಾಲಿಸಿಲ್ಲ, ಪ್ರತಿಕೂಲ ವಾತಾವರಣ ಇದ್ದರೂ ವಿಮಾನ ಇಳಿಸುವ ಸಾಹಸ ಮಾಡಿದ್ದಾರೆ. ವೈಪರ್ ದೋಷವಿದೆ ಎಂದು ಪೈಲೆಟ್ ಗೆ ಮೊದಲೇ ಗೊತ್ತಿತ್ತು. ವಿಮಾನ ಲ್ಯಾಂಡ್ ಮಾಡುವ ಮುನ್ನ ವಿಮಾನ ಲ್ಯಾಂಡಿಂಗ್ ಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿರಲಿಲ್ಲ ಹೀಗೆ ಇಡೀ ಅಪಘಾತಕ್ಕೆ ಪೈಲೆಟ್ ಲೋಪವೇ ಕಾರಣ ಎಂದು ಬೊಟ್ಟು ಮಾಡಲಾಗಿದೆ.
The Aircraft Accident Investigation Bureau released its probe report on the plane crash at Kozhikode airport in August 2020. Here’s all you need to know in 10 points.Air India Express’s B737-800 aircraft crashed at the Kozhikode (Calicut) International airport in Kerala on August 7, 2020.
Discussion about this post