ಕೇರಳ : ದೇವರನಾಡಿನ ಪ್ರಖ್ಯಾತ ಪುಣ್ಯ ಕ್ಷೇತ್ರ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನದಲ್ಲಿ ನವೆಂಬರ್ 15 ರಿಂದ ಭಕ್ತರಗೆ ದರ್ಶನ ಸಿಗಲಿದೆ. ಈ ಬಗ್ಗೆ ಮಾಹಿತಿ ಕೊಟ್ಟಿರುವ ತಿರುವಾಂಕೂರು ದೇವಸ್ವಂ ಬೋರ್ಡ್, ನವೆಂಬರ್ 15 ರಿಂದ 2 ತಿಂಗಳ ಕಾಲ ಭಕ್ತರು ಭೇಟಿ ನೀಡಬಹುದು ಅಂದಿದೆ.
ಶ್ರೀಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಕೋವಿಡ್ ಲಸಿಕೆ. ಪ್ರಮಾಣಪತ್ರ ಹಾಗೂ ಕೊರೋನಾ ನೆಗೆಟಿವ್ ವರದಿಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ.

ಬುಧವಾರ ಅಂದ್ರೆ ನವೆಂಬರ್ 3 ರಂದು ಅಟ್ಟವಿಶೇಷ ಪೂಜೆಗಾಗಿ ದೇವಾಲಯದ ಬಾಗಿಲು ತೆರೆಯಲಾಗಿತ್ತು, ಪೂಜೆ ನೆರವೇರಿಸಿದ ಬಳಿಕ ರಾತ್ರಿ 9 ಗಂಟೆಗೆ ಬಾಗಿಲು ಮುಚ್ಚಲಾಗಿದ್ದು, ಇನ್ನು ನವೆಂಬರ್ 15ರಂದೇ ಬಾಗಿಲು ತೆರೆಯಲಾಗುತ್ತದೆ.

ಕಳೆದ ತಿಂಗಳು ಕೇರಳದಲ್ಲಿ ಸಂಭವಿಸಿದ ಪ್ರವಾಹದ ಕಾರಣದಿಂದ ಶಬರಿಮಲೆ ದರ್ಶನಕ್ಕೆ ಅಡ್ಡಿಯಾಗಿತ್ತು, ಪಂಪಾನದಿ ಉಕ್ಕಿ ಹರಿದ ಕಾರಣ ಅನೇಕ ಭಕ್ತರಿಗೆ ದರ್ಶನ ಸಾಧ್ಯವಾಗಿರಲಿಲ್ಲ.

Discussion about this post