ಲಾಟರಿಯಿಂದ ಜನ ಸಾಮಾನ್ಯರು ಬೀದಿ ಪಾಲಾಗುತ್ತಾರೆ. ಅದರಲ್ಲಿ ಕಾರ್ಮಿಕರದ್ದು ಸಿಂಹ ಪಾಲು. ಆದರೆ ಕಾರ್ಮಿಕರ ಬಗ್ಗೆ ಮಾತನಾಡುವ ಕಮ್ಯುನಿಸ್ಟ್ ಸರ್ಕಾರ ಲಾಟರಿಯ ( kerala lottery ) ಬೆಂಬಲಕ್ಕೆ ನಿಂತಿದೆ
ಕೇರಳ : ಈ ಬಾರಿ ಕೇರಳ ಸರ್ಕಾರ ಓಣಂ ಲಾಟರಿ ಭರ್ಜರಿಯಾಗಿ ಮಾರಾಟವಾಗುವುದರಲ್ಲಿ ಅನುಮಾನವಿಲ್ಲ. ಯಾಕಂದ್ರೆ ಪಿಣರಾಯಿ ಸರ್ಕಾರಿ ಕೋಟಿ ಕೋಟಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಅಷ್ಟೇ ಯಾಕೆ ಈ ಬಾರಿ ಓಣಂನಲ್ಲಿ ವಿಜೇತರೆಲ್ಲರೂ ಕೋಟ್ಯಧಿಪತಿಗಳಾಗಲಿದ್ದಾರೆ. ( kerala lottery ) ( ಕೋಟಿ ಆಸೆಗೆ ಬಿದ್ದು ರಾಶಿ ರಾಶಿ ಟಿಕೆಟ್ ಖರೀದಿಸಿ ಬಹುಮಾನ ಬಾರದಿದ್ರೆ ಅವರು ಯಾವುದರ ಅಧಿಪತಿ ಆಗಬಹುದು ಅನ್ನುವುದು ನಿಮ್ಮ ಊಹೆಗೆ ಬಿಟ್ಟ ವಿಚಾರ.)
ಕೇರಳ ರಾಜ್ಯ ಲಾಟರಿ ಇಲಾಖೆ ಓಣಂ 2022ರ ಬಂಪರ್ ಲಾಟರಿ ಯೋಜನೆಯೊಂದನ್ನು ಸರ್ಕಾರದ ಮುಂದಿಟ್ಟಿತ್ತು. ಇದೀಗ ಅದಕ್ಕೆ ಸರ್ಕಾರ ಅನುಮೋದನೆ ಕೊಟ್ಟಿದ್ದು, ಕೋಟಿ ಕೋಟಿ ಮೊತ್ತದ ಟಿಕೆಟ್ ಜುಲೈ 18 ರಿಂದ ಮಾರುಕಟ್ಟೆಯಲ್ಲಿ ಸಿಗಲಿದೆ.
ಇದನ್ನೂ ಓದಿ : kl rahul marriage ಅಕ್ಟೋಬರ್ ತಿಂಗಳಲ್ಲಿ ಕೆ.ಎಲ್. ರಾಹುಲ್ – ಆಥಿಯಾ ವಿವಾಹ
ಈ ಬಾರಿ ಪ್ರಥಮ ಬಹುಮಾನ 25 ಕೋಟಿ ರೂಪಾಯಿ ನಿಗದಿಗೊಳಿಸಲಾಗಿದ್ದು, ದ್ವೀತಿಯ ಬಹುಮಾನ 5 ಕೋಟಿ, ಮತ್ತು ತಲಾ 1 ಕೋಟಿ 10 ತೃತೀಯ ಬಹುಮಾನ ನಿಗದಿಗೊಳಿಸಲಾಗಿದೆ. ಹೀಗಾಗಿ ಒಟ್ಟು 126 ಕೋಟಿ ರೂಪಾಯಿ ಬಹುಮಾನದ ಯೋಜನೆ ಇದಾಗಿದೆ. ಕಳೆದ 4 ವರ್ಷಗಳಿಂದ ಓಣಂ ಸಂದರ್ಭದ ಲಾಟರಿಯ ಮೊದಲ ಬಹುಮಾನವಾಗಿ 12 ಕೋಟಿ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ 25 ಕೋಟಿಗೆ ಏರಿಸಲಾಗಿದೆ.
ಈ ಕಾರಣದಿಂದ ಕಳೆದ ವರ್ಷ 300 ರೂಪಾಯಿ ಇದ್ದ ಟಿಕೆಟ್ ಬೆಲೆ ಈ ಬಾರಿ 500 ರೂಪಾಯಿಗೆ ಏರಲಿದೆ. ಸಪ್ಟಂಬರ್ 18 ರಂದು ಈ ಟಿಕೆಟ್ ನ ಡ್ರಾ ನಡೆಯಲಿದೆ. 25 ಕೋಟಿ ರೂಪಾಯಿ ವಿಜೇತರು 15.75 ಕೋಟಿ ರೂಪಾಯಿ ಹಣವನ್ನು ಮನೆಗೆ ಒಯ್ಯಲಿದ್ದಾರೆ. ಅಷ್ಟು ಮಾತ್ರವಲ್ಲದೆ ಮೊದಲ ಬಹುಮಾನ ಪಡೆಯುವ ಟಿಕೆಟ್ ಮಾರಿದ ಎಜೆಂಟ್ ಗೆ 2.5 ಕೋಟಿ ರೂಪಾಯಿ ಕಮಿಷನ್ ಸಿಗಲಿದೆ.
ಇದನ್ನೂ ಓದಿ : actor shivaranjan : ಶೃತಿ ಜೊತೆ ನಟಿಸಿದ್ದ ನಟನ ಮೇಲೆ ಗುಂಡಿನ ದಾಳಿ : ಅಪಾಯದಿಂದ ಪಾರಾದ ಶಿವರಂಜನ್
ಸಚಿವ ಸೋಮಣ್ಣ ಬೆಂಬಲಿಗರ ಗೂಂಡಾಗಿರಿ : ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ
ಭ್ರಷ್ಟಾಚಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ರವಿಕೃಷ್ಣಾ ರೆಡ್ಡಿ ನೇತೃತ್ವದ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಸಚಿವ ಸೋಮಣ್ಣ ಬೆಂಬಲಿಗರು ಪೊಲೀಸರ ಮುಂದೆಯೇ ಹಲ್ಲೆ ನಡೆಸಿದ್ದಾರೆ
ಬೆಂಗಳೂರು : ರಾಜಕಾರಣಿಗಳು ತಮ್ಮ ಬೆಂಬಲಿಗರನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಇಂದು ಸಾಕ್ಷಿಯಾಗಿದ್ದು ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಅನಧಿಕೃತ ಹೋಲ್ಡಿಂಗ್ ವಿರುದ್ದ KRS Party ಯ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುತ್ತಿದ್ದರು. ಸಚಿವ ಸೋಮಣ್ಣ ಅವರ ಕಟೌಟ್ ಅನ್ನು ತಕ್ಷಣ ತೆಗೆಸಬೇಕು ಮತ್ತು ಅದನ್ನು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನುವುದು ಅವರ ಆಗ್ರಹವಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಹಾಗೂ ಪ್ರತಿಭಟನಕಾರರ ನಡುವೆ ಇದೇ ವಿಷಯದಲ್ಲಿ ವಾಗ್ವಾದ ಕೂಡಾ ನಡೆದಿದೆ. ಇಷ್ಟೆಲ್ಲಾ ಬೆಳವಣಿಗೆಗಳು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರವಾಗುತ್ತಿತ್ತು.
ಹೀಗೆಲ್ಲಾ ಬೇಕಾಬಿಟ್ಟಿ ಕಟೌಟ್, ಹೋಲ್ಡಿಂಗ್ ಹಾಕುವುದು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ಹೀಗಾಗಿ ತಕ್ಷಣ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಂದ ಸಚಿವ ಸೋಮಣ್ಣ ಬೆಂಬಲಿಗರು KRS Partyಯ ಪ್ರತಿಭಟನಕಾರರ ಮೇಲೆ ಮುಗಿ ಬಿದ್ದಿದ್ದಾರೆ. ಮಾತಿನ ಚಕಮಕಿಯೂ ನಡೆದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನವನ್ನೂ ನಡೆಸಿದ್ದಾರೆ.
ಆದರೆ ಎಲ್ಲವೂ ಮುಗಿಯಿತು ಅನ್ನುವ ಹೊತ್ತಿಗೆ ಸೋಮಣ್ಣ ಅವರ ಕೆಲ ಬೆಂಬಲಿಗರು ಹಳದಿ ಬಣ್ಣ ಟೀ ಶರ್ಟ್ ಧರಿಸಿದ್ದ ಕೆ ಆರ್ ಎಸ್ ಪಾರ್ಟಿಯ ಸದಸ್ಯರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಈ ದೃಶ್ಯಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರವಾಗಿದೆ.
ಇನ್ನು ಈ ಘಟನೆ ಕುರಿತಂತೆ ಕೆ ಆರ್ ಎಸ್ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸಚಿವ ,ಸೋಮಣ್ಣ ಬೆಂಬಲಿಗರ ಗೂಂಡಾಗಿರಿ, ಪೊಲೀಸರು ಕೂಡಾ ನಮ್ಮ ಸಹಾಯಕ್ಕೆ ಬರಲಿಲ್ಲ. ಹಾಗಂತ ನಾವು ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ, ಹೋರಾಟ ಮುಂದುವರಿಯುತ್ತದೆ ಅಂದಿದ್ದಾರೆ.
Discussion about this post