ತಿರುವನಂತಪುರ : ದೇಶ ಸುತ್ತು ಕೋಶ ಓದು ಅನ್ನುವುದು ಮಾತು. ಆದರೆ ಅದೆಷ್ಟೋ ಮಂದಿಗೆ ಅವರದ್ದೇ ಸಮಸ್ಯೆಗಳ ಕಾರಣದಿಂದ ಅದು ಸಾಧ್ಯವಾಗಿರೋದಿಲ್ಲ. ಆದರೆ ಕೇರಳ ವೃದ್ಧ ದಂಪತಿ ಹಾಗಲ್ಲ, ದಿನದ ಆದಾಯದಲ್ಲಿ 300 ರೂಪಾಯಿ ಉಳಿಸಿ ಪ್ರತೀ ವರ್ಷ ಒಂದು ದೇಶಕ್ಕೆ ಪ್ರವಾಸ ಹೋಗಿ ಬರುತ್ತಾರೆ.
ಅವರು ಬೇರಾರು ಅಲ್ಲ, ಕೇರಳದ ಹಾರುವ ದಂಪತಿ ಎಂದೇ ಪ್ರಸಿದ್ಧರಾಗಿರುವ ವಿಜಯನ್ (71) ಮತ್ತು ಮೋಹನಾ (69) ಈಗಾಗಲೇ 25 ದೇಶಗಳನ್ನು ಸುತ್ತಿ ಬಂದಿರುವ ದಂಪತಿ 26 ನೇ ದೇಶವನ್ನು ನೋಡಲು ರಷ್ಯಾಗೆ ತೆರಳಲಿದ್ದಾರೆ. 2007ರಲ್ಲಿ ಮೊದಲಿಗೆ ಇಸ್ರೇಲ್ ಪ್ರವಾಸ ಹೋಗಿದ್ದ ಇವರು ನಂತರ ಬ್ರಿಟನ್, ಫ್ರಾನ್ಸ್, ಆಸ್ಟ್ರೇಲಿಯಾ, ಈಜಿಪ್ಟ್, ಯುಎಇ, ಅಮೆರಿಕಾ ಸೇರಿ 25 ದೇಶ ಸುತ್ತಿ ಬಂದಿದ್ದರು.
ಇವರ ಈ ಪ್ರವಾಸದ ಸುದ್ದಿ ಕೆಲ ವರ್ಷಗಳ ಹಿಂದೆ ವೈರಲ್ ಆಗಿದ್ದ ಸಂದರ್ಭದಲ್ಲಿ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ದಂಪತಿಯ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸದ ಪ್ರಾಯೋಜಕತ್ವ ವಹಿಸಿಕೊಂಡಿದ್ದರು.
ತಿರುವನಂತಪುರದಲ್ಲಿ ಶ್ರೀ ಬಾಲಾಜಿ ಕಾಫಿ ಹೌಸ್ ನಡೆಸುತ್ತಿರುವ ದಂಪತಿ, ಇಲ್ಲಿಂದ ಬರುವ ಆದಾಯದಿಂದಲೇ ಪ್ರತೀ ವರ್ಷ ದೇಶ ಸುತ್ತಿ ಬರುತ್ತಾರೆ. ಮತ್ತೊಂದು ವಿಶೇಷ ಅಂದ್ರೆ ತಮ್ಮ ಹೊಟೇಲ್ ನಲ್ಲಿ ದೊಡ್ಡದೊಂದು ಗ್ಲೋಬ್ ಇಟ್ಟುಕೊಂಡಿರುವ ದಂಪತಿ ತಾವು ಸುತ್ತಿರುವ ದೇಶ ಯಾವುದು, ಸುತ್ತಬೇಕಾಗಿರುವ ದೇಶ ಯಾವುದೇ ಎಂದು ಹೇಳುತ್ತಾರೆ.
Discussion about this post