ತನ್ನದೇ ಪಕ್ಷದ ಕಾರ್ಯಕರ್ತರ ಮೇಲೆ ಲಾಠಿ ಬೀಸಿದ ಸರ್ಕಾರವಿದ್ರೆ ಅದು ಬೊಮ್ಮಾಯಿ ಸರ್ಕಾರ ಮಾತ್ರ ಅನ್ನುವುದು ತಳಮಟ್ಟದಲ್ಲಿ ದುಡಿದವರ ಬೇಸರದ ನುಡಿ (Karnataka)
ಮಂಗಳೂರು : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅನೇಕ ಸಲ ಪೊಲೀಸರು ತಮ್ಮ ಲಾಠಿ ಬೀಸುತ್ತಾರೆ. ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಅದು ಅನಿವಾರ್ಯವಾಗಿರುತ್ತದೆ ಕೂಡಾ. ( Karnataka ) ಇನ್ನು ಕರಾವಳಿ ವಿಚಾರಕ್ಕೆ ಬಂದ್ರೆ ಕೋಮು ವಿಚಾರದಲ್ಲಿ ಕೊಲೆ ನಡೆದ ಸಂದರ್ಭದಲ್ಲೂ ಲಾಠಿ ಜಾರ್ಜ್ ಗಳಾಗಿದೆ. ಆದರೆ ಬಿಜೆಪಿ ಸರ್ಕಾರವೇ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಬೀಸಿದ ಪ್ರಕರಣ ಇದೇ ಮೊದಲ ಬಾರಿಗೆ ಇಂದು ಬೆಳ್ಳಾರೆಯಲ್ಲಿ ನಡೆದಿದೆ. ಪ್ರವೀಣ್ ನೆಟ್ಟಾರು ಅವರ ಅಂತಿಮ ದರ್ಶನ ಸಂದರ್ಭದಲ್ಲಿ ನಾಯಕರ ನಿರ್ಲಕ್ಷ್ಯ ಖಂಡಿಸಿ ದನಿ ಎತ್ತಿದ ಕಾರ್ಯಕರ್ತರು ಲಾಠಿ ರುಚಿ ನೋಡಿದ್ದಾರೆ.
ಒಂದೆಡೆ ಪ್ರವೀಣ್ ನೆಟ್ಟಾರು ಸಾವಿನ ನೋವು, ಮತ್ತೊಂದು ಕಡೆ ನ್ಯಾಯ ಕೇಳಿದ ಕಾರ್ಯಕರ್ತರಿಗೆ ಲಾಠಿ ರುಚಿ. (Karnataka) ಈ ಎರಡರ ನಡುವೆ ಗುರುವಾರ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ 1 ವರ್ಷದ ಸಂಭ್ರಮೋತ್ಸವವನ್ನು ಆಚರಿಸಲಿದೆ. ಜೊತೆಗೆ ಬಿಜೆಪಿ ಸರ್ಕಾರ 3 ವರ್ಷ ಪೂರೈಸಿದ ಸಂಭ್ರಮವೂ ಸೇರಿಕೊಂಡಿದೆ. ಈ ಎರಡು ಸಂಭ್ರಮಕ್ಕಾಗಿ ಎರಡು ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಲಾಗಿದೆ. ಒಂದು ಸರ್ಕಾರದ ವತಿಯಿಂದ ಮತ್ತೊಂದು ಪಕ್ಷದ ವತಿಯಿಂದ.
ಇದನ್ನೂ ಓದಿ : Karnataka BJP : ಬಿಜೆಪಿ ರಾಜ್ಯ ಉಸ್ತುವಾರಿ ಸ್ಥಾನಕ್ಕೆ ಅಮಿತ್ ಶಾ ಆಪ್ತನ ಎಂಟ್ರಿ
ಸರ್ಕಾರದ ಕಾರ್ಯಕ್ರಮವನ್ನು ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದು, ಪಕ್ಷದ ವತಿಯ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಹೆಸರಿನಲ್ಲಿ ನಡೆಯಲಿದೆ. ಚುನಾವಣಾ ವರ್ಷವಾಗಿರುವ ಕಾರಣ ಒಂದಿಷ್ಟು ಹೊಸ ಯೋಜನೆ, ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳಿಗೆ ಸುಣ್ಣ ಬಣ್ಣ ಬಳಿದು ಲೋಕಾರ್ಪಣೆ ಮಾಡುವ ಸಾಧ್ಯತೆಗಳಿದೆ.
ಇದೇ ಕಾರ್ಯಕ್ರಮದಲ್ಲಿ ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ, ಇದು ನಮ್ಮ ಸಂಕಲ್ಪ ಅನ್ನುವ ಹೆಸರಿನ1 ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ನಡೆಯಲಿದೆ. ಮಾತ್ರವಲ್ಲದೆ ಒಂದು ವರ್ಷದಲ್ಲಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷದ ಮಾಡಿದ ಭಾಷಣದ ಆಯ್ದು ಭಾಗಗಳನ್ನು ಒಳಗೊಂಡ ಹೊತ್ತಿಗೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ : Congress Protest : ಗುಜರಿಯಿಂದ ಕಾರು ತಂದು ಬೆಂಕಿ ಹಚ್ಚಿದ ಕಾಂಗ್ರೆಸ್ ಕಾರ್ಯಕರ್ತರು
ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನೋತ್ಸವದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪಾಲ್ಗೊಳ್ಳಲಿದ್ದಾರೆ. ಇನ್ನು ಜನೋತ್ಸವ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನರನ್ನು ಸೇರಿಸಲು ಬಿಜೆಪಿ ನಾಯಕರು ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ.
Discussion about this post