ಸರಣಿ ಹತ್ಯೆ ಬೆನ್ನಲ್ಲೇ ಸರಣಿ ರಾಜೀನಾಮೆ ಬಗ್ಗೆ ಅಮಿತ್ ಶಾ ಗರಂ ಆಗಿದ್ದಾರೆ. (Karnataka BJP) ಮುಂದಿನ ಎಲೆಕ್ಷನ್ ಗೆಲ್ಲಲು ನಿಮ್ಮ ಪ್ಲಾನ್ ಏನು
ಬೆಂಗಳೂರು : ರಾಜ್ಯ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ನಿನ್ನೆ ಸುದ್ದಿಯಾಗಿತ್ತು.ಇದರ ಬೆನ್ನಲ್ಲೇ (Karnataka BJP) ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೂ ಅಮಿತ್ ಶಾ ಕ್ಲಾಸ್ ತೆಗೆದುಕೊಂಡಿದ್ದಾರಂತೆ.
ಕಡಲ ನಗರಿಯಲ್ಲಿ ನಡೆದ ಸಾಲು ಹತ್ಯೆ ಬೆನ್ನಲ್ಲೇ (Karnataka BJP) ಬಿಜೆಪಿ ಕಾರ್ಯಕರ್ತರ ರಾಜೀನಾಮೆ ಪಕ್ಷದ ಬುಡವನ್ನೇ ಅಲ್ಲಾಡಿಸಿತ್ತು. ಒಂದೆಡೆ ಕಾನೂನು ಸುವ್ಯವಸ್ಥೆ ಕಾಪಾಡುವ ಛಾಲೆಂಜ್ ಮತ್ತೊಂದು ಕಡೆ ಕಾರ್ಯಕರ್ತರ ಸರಣಿ ರಾಜೀನಾಮೆಯಿಂದ ಬಿಜೆಪಿ ನಾಯಕರು ಕಂಗಲಾಗಿದ್ದರು. ಡ್ಯಾಮೇಜ್ ಕಂಟ್ರೋಲ್ ಮಾಡುವಲ್ಲೂ ರಾಜ್ಯ ನಾಯಕರು ವಿಫಲರಾಗಿದ್ದರು. ಈಗ್ಲೂ ಕಾರ್ಯಕರ್ತರ ಕೋಪ ತಣಿಸಲು ನಾಯಕರಿಗೆ ಸಾಧ್ಯವಾಗಿಲ್ಲ. ಮೋದಿಗಾಗಿ ದುಡಿಯುತ್ತೇವೆ, ರಾಜ್ಯ ಬಿಜೆಪಿ ನಮ್ಮ ಬೆಂಬಲವಿಲ್ಲ ಅನ್ನುವುದು ಕಾರ್ಯಕರ್ತರ ಖಡಕ್ಕ್ ಮಾತು
ಇದನ್ನೂ ಓದಿ : Mallikarjun kharge : ರಾಷ್ಟ್ರಪತಿ ಪ್ರಮಾಣ ವಚನ ಸಮಾರಂಭದಲ್ಲಿ ಖರ್ಗೆಗೆ ನೀಡಿದ ಆಸನದ ಬಗ್ಗೆ ಆಕ್ಷೇಪ
ಈ ನಡುವೆ ಬುಧವಾರ ರಾತ್ರಿ ಬೆಂಗಳೂರಿಗೆ ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ತಮ್ಮನ್ನು ಭೇಟಿಯಾದ ರಾಜ್ಯ ನಾಯಕರಿಗೆ ಅಮಿತ್ ಶಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೂ ಸಾಲು ಸಾಲು ಪ್ರಶ್ನೆ ಕೇಳಿರುವ ಅಮಿತ್ ಶಾ , ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ನಿಮ್ಮ ಪ್ಲಾನ್ ಏನು, ನಿಮ್ಮ ಶ್ರಮ ಏನು ಎಂದು ಪ್ರಶ್ನಿಸಿದ್ದಾರೆ.
ನಿಮ್ಮದೇ ಕ್ಷೇತ್ರದಲ್ಲಿ ಸರಣಿ ಹತ್ಯೆಗಳು ನಡೆದಿದೆ. ನಿಮ್ಮದೇ ಕ್ಷೇತ್ರದಲ್ಲಿ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಚುನಾವಣಾ ವರ್ಷದಲ್ಲಿ ಹೀಗಾದ್ರೆ ಪಕ್ಷ ಮತ್ತೊಮ್ಮೆ ಗೆಲ್ಲುವುದು ಹೇಗೆ. ನಮ್ದು ಕೇಡರ್ ಪಾರ್ಟಿ, ಹೀಗಿರುವಾಗ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಕೈಗೊಂಡಿರುವ ಕ್ರಮಗಳೇನು ಎಂದು ಸಾಲು ಸಾಲು ಪ್ರಶ್ನೆ ಎಸೆದಿದ್ದಾರೆ ಅನ್ನಲಾಗಿದೆ.
ಇದನ್ನೂ ಓದಿ : Araga jnanendra amit shah : ನಿಮಗೆ ಆಗೋದಿಲ್ಲ ಅಂದ್ರೆ ಹೇಳಿ : ಆರಗ ಜ್ಞಾನೇಂದ್ರಗೆ ಅಮಿತ್ ಶಾ ಕ್ಲಾಸ್
ಈ ನಡುವೆ ಅಮಿತ್ ಶಾ ಆರಗ ಅವರನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಗೃಹ ಸಚಿವರಾಗಿ ಒಂದು ವರ್ಷ ಪೂರೈಸಿರುವ ಅವರನ್ನು ಗೃಹ ಸಚಿವರನ್ನು ಬದಲಾಯಿಸಲಾಗುತ್ತದೆ ಅನ್ನಲಾಗಿತ್ತು, ಪೂರಕವಾಗಿ ಗೃಹ ಇಲಾಖೆಯ ಸಭೆಯನ್ನು ಗೃಹ ಸಚಿವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳೇ ನಡೆಸಿದ್ದರು.
ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಆರಗ ಜ್ಞಾನೇಂದ್ರ ಅವರನ್ನು ಕೆಳಗಿಳಿಸಲು ಅಮಿತ್ ಸಾ ಒಲವು ತೋರಿಲ್ಲ. ಬದಲಾಗಿ ಆರಗ ಅವರನ್ನು ತುಂಬಾ ಸಾಫ್ಟ್ ಮನೋಸ್ಥಿತಿ, ತುಂಬಾ ಸಾಫ್ಟ್ ಆಗಿದ್ರೆ ಕಷ್ಟ. ಖಡಕ್ಕ್ ಆಗಿದ್ದಾಗ ಮಾತ್ರ ಗೃಹ ಇಲಾಖೆಯನ್ನು ನಿಭಾಯಿಸೋದು ಸುಲಭ. ಹೀಗಾಗಿ ಖಡಕ್ಕ್ ಆಗಿರಲು ಹೇಳಿ ಅಂತಾ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಅಮಿತ್ ಶಾ ಸೂಚನೆ ನೀಡಿದ್ದಾರಂತೆ.
ಈಗಿರುವ ಪಕ್ಷ ಸಂಘಟನೆ ಮತ್ತು ರಾಜ್ಯ ಸರ್ಕಾರದ ವರ್ಚಸ್ಸಿನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಪಕ್ಷ ಮತ್ತು ಸರ್ಕಾರ ವರ್ಚಸ್ಸು ಹೆಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳಿ ಎಂದು ಇದೇ ವೇಳೆ ರಾಜ್ಯ ನಾಯಕರಿಗೆ ಸೂಚಿಸಿರುವ ಅಮಿತ್ ಶಾ ಮುಂಬರುವ ವಿಧಾನಸಭಾ ಚುನಾವಣೆಗೆ ಮಾರ್ಗ ನಕ್ಷೆಯನ್ನು ರೂಪಿಸಿ ಅಂದಿದ್ದಾರೆ.
ಇದೇ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ತ್ವರಿತವಾಗಿ ರಣತಂತ್ರ ರೂಪಿಸದಿದ್ರೆ ಗೆಲವು ಕಷ್ಟ ಎಂದು ಮಾಜಿ ಸಿಎಂ ಯಡಿಯೂರಪ್ಪ ಅಮಿತ್ ಶಾ ಅವರಿಗೆ ನೇರವಾಗಿ ಹೇಳಿದ್ದಾರೆ. ಪ್ರತಿಪಕ್ಷಗಳ ವೇಗಕ್ಕೆ ಸರಿಯಾಗಿ ನಾವಿಲ್ಲ ಎಂದು ಅಮಿತ್ ಶಾ ಅವರಿಗೆ ಮನವರಿಕೆ ಮಾಡಿರುವ ಯಡಿಯೂರಪ್ಪ ಬಿಜೆಪಿ ಪಕ್ಷದ ಸಂಘಟನೆ ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲ ಎಂದು ಹೇಳಿದ್ದಾರೆ.
Discussion about this post