ರಾಜ್ಯದ ಕಾರ್ಯಕರ್ತರ ಗಾಯಕ್ಕೆ ಮುಲಾಮು ಹಚ್ಚಲು ಕೇಂದ್ರದ ನಾಯಕರೇ (Araga jnanendra amit shah) ಬರಬೇಕಾಗಿ ಬಂದಿರುವುದು ಮಾತ್ರ ದುರಂತ
ಬೆಂಗಳೂರು : ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Araga jnanendra amit shah) ನಿನ್ನೆ ರಾತ್ರಿ ಬಿಜೆಪಿ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಇಡೀ ಸಭೆಯಲ್ಲಿ ಕಾರ್ಯಕರ್ತರ ರಾಜೀನಾಮೆ, ಕರಾವಳಿಯಲ್ಲಿ ನಡೆದ ಹತ್ಯೆಗಳೇ ಚರ್ಚೆಗೆ ಬಂದಿದೆ.
ಈ ನಡುವೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಅಮಿತ್ ಶಾ,(Araga jnanendra amit shah) ಕರಾವಳಿ ಸರಣಿ ಹತ್ಯೆಗೆ ಕಾರಣಗಳನ್ನು ಕೇಳಿದ್ದಾರೆ. ನೀವು ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಮುಖ್ಯವಲ್ಲ, ಹತ್ಯೆಗಳನ್ನು ತಡೆಯುವುದು ಮುಖ್ಯ.
ಇದನ್ನೂ ಓದಿ : Police fight : ಊಟದ ವಿಚಾರಕ್ಕೆ ಕಿತ್ತಾಡಿಕೊಂಡ ಮಂಗಳೂರು ಮತ್ತು ಚಿಕ್ಕಮಗಳೂರು ಪೊಲೀಸರು
ನೀವು ಹತ್ಯೆ ಬಗ್ಗೆ ವಿವರಗಳನ್ನು ಯಾಕೆ ಪಡೆದುಕೊಂಡಿಲ್ಲ. ನಿಮಗೆ ಆಗೋದಿಲ್ಲ ಅಂದ್ರೆ ತಿಳಿಸಿ, ನಾನೇ ಅಗತ್ಯ ಕ್ರಮಗಳನ್ನು ಕೈಗಳ್ಳುತ್ತೇನೆ. ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳುವುದು ನಮಗೆ ಗೊತ್ತು ಎಂದು ಹೇಳಿದ್ದಾರೆ ಅಂತಾ ನ್ಯೂಸ್ ಫಸ್ಟ್ ವಾಹಿನಿ ವರದಿ ಮಾಡಿದೆ.

ಇನ್ನು ಅಮಿತ್ ಶಾ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆರಗ ಜ್ಞಾನೇಂದ್ರ, ಕೇಂದ್ರ ಗೃಹ ಸಚಿವರು ಹಲವು ಮಾಹಿತಿಗಳನ್ನು ಕೇಳಿದ್ದಾರೆ. ಅವರು ಕೇಳಿದ ಮಾಹಿತಿಯನ್ನು ನಾವು ಹಂಚಿಕೊಂಡಿದ್ದೇವೆ. ಈ ವಿವರಗಳನ್ನು ಮಾಧ್ಯಮದ ಮುಂಚೆ ಹಂಚಿಕೊಳ್ಳಲು ಸಾಧ್ಯವಿಲ್ಲ ಅಂದಿದ್ದಾರೆ.
Discussion about this post