ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯಲಾಲ್ ಹಂತಕರಲ್ಲೊಬ್ಬ ಪಾಕ್ ಗೆ ಹೋಗಿ ಬಂದಿದ್ದ
ನವದೆಹಲಿ : ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಶಿರ ಕಡಿದು ಕೊಲೆ ಮಾಡಿದ ಹಂತಕರು ಪಾಕ್ ನ ದಾವತ್ – ಎ – ಇಸ್ಲಾಮಿ ಎಂಬ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಹಾಗೂ ಐಸಿಸ್ ಸಂಘಟನೆಯಿಂದ ಪ್ರೇರಪಣೆಗೊಂಡಿದ್ದರು ಅನ್ನುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಈ ಪೈಕಿ ಗೌಸ್ ಮೊಹಮ್ಮದ್ 2014ರಲ್ಲಿ ಪಾಕಿಸ್ತಾನದ ಕರಾಚಿಗೂ ಹೋಗಿ ಬಂದಿದ್ದ. ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಭಾರತದಲ್ಲಿ ಕೋಮುವಾದದ ವಿಷ ಬೀಜ ಬಿತ್ತಲು ಪಾಕಿಸ್ತಾನ ಕುತಂತ್ರ ರೂಪಿಸುತ್ತಿರುವುದು ಸ್ಪಷ್ಟವಾಗಿದೆ. ಈ ನಡುವೆ ಇದೇ ಕೊಲೆ ಪ್ರಕರಣ ಸಂಬಂಧ ಇನ್ನೂ ಮೂವರನ್ನು ರಾಜಸ್ಥಾನ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಲಾಗಿದೆ.
ಇನ್ನು ತಲೆ ಕಡಿದ ಪ್ರಕರಣ ಸಂಬಂಧ ಎನ್ಐಎ ಕೂಡಾ ತನಿಖೆ ಪ್ರಾರಂಭಿಸಿದ್ದು, ವಿವಿಧ ಪರಿಚ್ಛೇದಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಈ ನಡುವೆ ಮಹಾರಾಷ್ಟ್ರದ ಅಮರಾವತಿಯಲ್ಲೂ ಇಂತಹುದೇ ಘಟನೆ ನಡೆದಿರುವ ಬಗ್ಗೆ ವರದಿಯಾಗಿದ್ದು, 1 ವಾರಗಳ ಹಿಂದೆ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದ ವ್ಯಾಪಾರಿಯೊಬ್ಬರ ಕತ್ತು ಸೀಳೆ ಕೊಲೆ ಮಾಡಲಾಗಿದೆಯಂತೆ. ಈ ಬಗ್ಗೆ ತನಿಖೆ ನಡೆದಿದ್ದು, ಸ್ಪಷ್ಟ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.
Discussion about this post