ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಉಗ್ರ ಶಿಬಿರದ ಮೇಲೆ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಗೆ ಪಾಕಿಸ್ತಾನಕ್ಕಿಂತ ಹೆಚ್ಚು ಸಾಕ್ಷಿ ಹೇಳಿದ್ದು ಭಾರತದ ಮಂದಿ ಅನ್ನುವುದು ಗಮನಾರ್ಹ. ಅದರಲ್ಲೂ ಬಿಜೆಪಿ ವಿರೋಧಿ ಪಕ್ಷಗಳು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ದೊಡ್ಡ ವಿಷಯವೇ ಅನ್ನುವಂತೆ ಪ್ರಶ್ನಿಸಿದ್ದರು.
ಇದೀಗ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಅನ್ನುವುದಕ್ಕೆ ಇಟಲಿಯ ಪತ್ರಕರ್ತೆಯೊಬ್ಬರು ಸಾಕ್ಷಿ ಒದಗಿಸಿದ್ದಾರೆ. ಭಾರತದ ವೈಮಾನಿಕ ಕಾರ್ಯಾಚರಣೆಯಲ್ಲಿ 170 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಸೇನೆ ಹಾಗೂ ಸ್ಥಳೀಯ ಮೂಲಗಳ ಖಚಿತ ಮಾಹಿತಿ ಆಧರಿಸಿ ಇಟಲಿ ಪತ್ರಕರ್ತೆ ಫ್ರಾನ್ಸೆಸ್ಕಾ ಹೇಳಿದ್ದಾರೆ.
ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ಉಗ್ರರ ಆತ್ಮಾಹುತಿ ದಾಳಿ ಬಳಿಕ ಫೆ. 26ರ ನಸುಕಿನ ವೇಳೆಯಲ್ಲಿ (3.30) ಭಾರತೀಯ ವಾಯುಪಡೆ ಬಾಲಾಕೋಟ್ನ ಉಗ್ರರ ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿತು. ವಿಷಯ ತಿಳಿಯುತ್ತಿದ್ದಂತೆಯೇ ಬಾಲಾಕೋಟ್ನಿಂದ 20 ಕಿ.ಮೀ.ದೂರದಲ್ಲಿರುವ ಶಿಂಕಿಯಾರಿ ಸೇನಾ ನೆಲೆಯಿಂದ ತುಕಡಿಗಳನ್ನು ರವಾನಿಸಲಾಯಿತು.
ಈ ತುಕಡಿಗಳು ಬೆಳಗ್ಗೆ 6ಕ್ಕೆ ಬಾಲಾಕೋಟ್ ತಲುಪಿ ಗಾಯಗೊಂಡ ಉಗ್ರರನ್ನು ಶಿಂಕಿಯಾರಿಯಲ್ಲಿರುವ ಹರ್ಕತ್-ಉಲ್- ಮುಜಾಹಿದ್ದೀನ್ (ಎಚ್ಯುುಎಂ) ಶಿಬಿರಕ್ಕೆ ರವಾನಿಸಿದರು. ಅಲ್ಲಿ ಸೇನಾ ವೈದ್ಯರು ಗಾಯಾಳುಗಳಿಗೆ ಚಿಕಿತ್ಸೆ ನೀಡಿದರು. ಆದರೆ, ಗಂಭೀರವಾಗಿ ಗಾಯಗೊಂಡ 20 ಉಗ್ರರು ಚಿಕಿತ್ಸೆಗೆ ಸ್ಪಂದಿಸದೆ ಮರಣ ಹೊಂದಿದರು.
ಎಚ್ಯುುಎಂ ಶಿಬಿರದಲ್ಲಿ ಈಗಲೂ ಸುಮಾರು 45 ಉಗ್ರರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಂಡ ಉಗ್ರರನ್ನು ಎಚ್ಯುುಎಂ ಶಿಬಿರದಿಂದ ಹೊರಹೋಗದಂತೆ ಸೇನೆ ತಡೆದಿದೆ ಎಂದು ಫ್ರಾನ್ಸೆಸ್ಕಾ ಮರಿನೋ ವರದಿ ತಿಳಿಸಿದೆ.
ವಾಯು ದಾಳಿಯಲ್ಲಿ ಮಡಿದವರಲ್ಲಿ ಅಫ್ಘಾನಿಸ್ತಾನದಿಂದ ಬಂದಿದ್ದ ಇಬ್ಬರು, ಜೆಇಎಂನ 11 ತರಬೇತಿದಾರರು ಮತ್ತು ಬಾಂಬ್ ತಯಾರಿಕೆಯಲ್ಲಿ ನಿಪುಣರಾದ ಉಗ್ರರು, ತರಬೇತಿಗಾಗಿ ಕರೆತಂದಿದ್ದ ಯುವಕರು ಸೇರಿದ್ದರೆಂದು ಎಂದು ವರದಿಯಲ್ಲಿ ಉಲ್ಲೇಖಿಸಿರುವ ಮರಿನೋ ಸರ್ಜಿಕಲ್ ದಾಳಿಗೆ ಧ್ವಂಸಗೊಂಡ ಬಾಲಾಕೋಟ್ನ ಜಿಇಎಂ ಶಿಬಿರ ಬೆಟ್ಟದ ಮೇಲಿತ್ತು. ಅಲ್ಲಿಗೆ ಹೋಗಲು ಕಾಲುದಾರಿಯಷ್ಟೇ ಇತ್ತು.

ಸದ್ಯ ಈ ಸ್ಥಳವೀಗ ಸೇನೆಯ ನಿಯಂತ್ರಣದಲ್ಲಿದ್ದು, ಕ್ಯಾಪ್ಟನ್ rankನ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅಲ್ಲಿ ಉಗ್ರರು ಇದ್ದರು ಎಂಬ ಕುರುಹನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗಿದೆ. ಜೆಇಎಂ ಮುಖ್ಯಸ್ಥ ಅಜರ್ನನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಉಗ್ರರ ಶಿಬಿರವಿದ್ದ ಸ್ಥಳದಲ್ಲೀಗ ಧಾರ್ವಿುಕ ಶಿಕ್ಷಣದ ತಲೀಮ್ಉಲ್-ಕುರಾನ್ನ ಫಲಕ ಹಾಕಲಾಗಿದೆ. ಮಕ್ಕಳು ಮತ್ತು ಮೂರ್ನಾಲ್ಕು ಶಿಕ್ಷಕರು ಮಾತ್ರ ಅಲ್ಲಿದ್ದಾರೆ. ಸ್ಥಳೀಯ ಪೊಲೀಸರಿಗೂ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
Discussion about this post