ನವದೆಹಲಿ : 2023 ರಿಂದ 27ರ ತನಕದ ಐಪಿಎಲ್ ಪ್ರಸಾರ ಹಕ್ಕು ಮಾರಾಟದ ಹರಾಜು ಪ್ರಕ್ರಿಯೆ ಇಂದು ಪ್ರಾರಂಭಗೊಳ್ಳಲಿದೆ. ಜೂನ್ 12 ಹಾಗೂ ಜೂನ್ 13 ರಂದು ಹರಾಜು ಕಾರ್ಯ ನಡೆಯಲಿದ್ದು. ಪೂರ್ತಿ ಪ್ರಕ್ರಿಯೆ ಇ- ಹರಾಜು ಮೂಲಕ ನಡೆಯಲಿದೆ.
ಹರಾಜಿನ ಮೂಲ ಬೆಲೆಯನ್ನು 32 ಸಾವಿರ ಕೋಟಿ ನಿಗದಿ ಪಡಿಸಲಾಗಿದ್ದು, ಇದು 45 ಸಾವಿರ ಕೋಟಿ ಆದಾಯ ತಂದುಕೊಡುವ ನಿರೀಕ್ಷೆ ಇದೆ. ಒಟ್ಟು ನಾಲ್ಕು ವಿಭಾಗದಲ್ಲಿ ಹರಾಜು ನಡೆಯುವ ಕಾರಣ ಬಿಸಿಸಿಐ ದೊಡ್ಡ ಮೊತ್ತದ ಗಂಟು ಹೊಡೆಯುವ ಸಾಧ್ಯತೆಗಳಿದೆ.
ಈ ನಡುವೆ ಅಮೆಜಾನ್ ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದು, ರಿಲಯನ್ಸ್ ಮಾಲೀಕತ್ವದ ವಯಾಂಕ 18, ಹಾಲಿ ಪ್ರಸಾರದ ಹಕ್ಕು ಪಡೆದಿರುವ ಡಿಸ್ನಿ ಸ್ಟಾರ್, ಝೀ, ಮತ್ತು ಸೋನಿ ಕಂಪನಿಗಳು ಈ ಬಾರಿ ಪ್ರಸಾರ ಹಕ್ಕು ಪಡೆಯಲು ಪೈಪೋಟಿ ನಡೆಸಲಿದೆ. ಇದರೊಂದಿಗೆ ಟೈಮ್ಸ್ ಇಂಟರ್ ನೆಟ್, ಫ್ಯಾನ್ ಕೋಡ್, ಫನ್ ಏಷ್ಯಾ, ಡ್ರೀಮ್ ಇಲೆವೆನ್, ಮತ್ತು ಕೆಲ ವಿದೇಶಿ ಸಂಸ್ಥೆಗಳು ಕೂಡಾ ಹರಾಜಿನಲ್ಲಿದೆ.
ಈ ಹಿಂದೆ ಅಂದ್ರೆ 2018 ರಿಂದ 22ರ ತನಕದ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ( ಡಿಸ್ನಿ ಸ್ಟಾರ್ ) 16, 347 ಕೋಟಿ ರೂಪಾಯಿಗೆ ತನ್ನದಾಗಿಸಿತ್ತು.
Discussion about this post