ದುಬೈ : 14ನೇ ಆವೃತ್ತಿಯ IPL ಪಂದ್ಯಾವಳಿ ಮುಕ್ತಾಯಗೊಂಡಿದ್ದು, ಹಲವು ಆತಂಕಗಳ ನಡುವೆ ಯಶಸ್ವಿಯಾಗಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ kolkata knight riders ವಿರುದ್ಧ chennai super kings 27 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 4ನೇ ಬಾರಿ ಐಪಿಎಲ್ ನಲ್ಲಿ ಚಾಂಪಿಯನ್ ಆಗಿ ಧೋನಿ ಪಡೆ ಹೊರ ಹೊಮ್ಮಿದೆ. 2010, 2011, 2018ರಲ್ಲಿ ಚೆನೈ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಟಾಸ್ ಗೆದ್ದರೂ ಬ್ಯಾಟಿಂಗ್ ಆಯ್ದುಕೊಳ್ಳದ ಕೆಕೆಆರ್, ಚೆನ್ನೈ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. 192 ರನ್ ಗಳ ಸವಾಲು ಬೆನ್ನು ಹತ್ತಿದ್ದ ಕೆಕೆಆರ್ ಗೆ ಬೆನ್ನತ್ತಬಹುದಾದ ಮೊತ್ತವಾಗಿತ್ತು. ಹೀಗಾಗಿ ತಂಡ ಆರಂಭಿಕರು ಉತ್ತಮ ರನ್ ಕಲೆಕ್ಟ್ ಮಾಡಿದ್ರು, ನಂತರ ಬಂದ ಆಟಗಾರರು ಆಸಕ್ತಿ ಕೋರಲಿಲ್ಲ.
ಇನ್ನು ಚೆನ್ನೈ ತಂಡ ಬೌಲಿಂಗ್ ದಾಳಿ ಹಾಗೂ ಬೆಸ್ಟ್ ಫೀಲ್ಟಿಂಗ್ ಕೆಕೆಆರ್ ತಂಡವನ್ನು ತತ್ತರಿಸುವಂತೆ ಮಾಡಿತ್ತು.
Discussion about this post