ಲಂಡನ್ : ವುಹಾನ್ ವೈರಸ್ ಸೋಲಿಸುವ ನಿಟ್ಟಿನಲ್ಲಿ ವಿಶ್ವದಲ್ಲಿ ಅನೇಕ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಆದರೆ ಒಂದಲ್ಲ ಒಂದು ಲಸಿಕೆಗೆ ಶತ್ರು ಅನ್ನುವಂತೆ ರೂಪಾಂತರಿ ವೈರಸ್ ಗಳು ಹುಟ್ಟಿಕೊಳ್ಳುತ್ತಿದೆ. ಹೀಗಾಗಿಯೇ ಅದ್ಯಾವ ಲಸಿಕೆಯೂ ಶೇ 100 ಪರಿಣಾಮಕಾರಿಯಾಗಲು ಸಾಧ್ಯವಾಗಿಲ್ಲ. ಕೊರೋನಾದ ರೂಪಾಂತರಿ ವೈರಸ್ ರಕ್ತ ಬೀಜಾಸುರನಂತೆ ಹುಟ್ಟಿಕೊಳ್ಳದಿರುತ್ತಿದ್ರೆ ಇಷ್ಟು ಹೊತ್ತಿಗೆ ಚೈನಾ ವೈರಸ್ ಅನ್ನು ಸೋಲಿಸಬಹುದಾಗಿತ್ತು.
ಈ ನಡುವೆ ಕೊರೋನಾ ಹೊಡೆದೊಡಿಸುವ ನಿಟ್ಟಿನಲ್ಲಿ ಮೂಗಿನ ಮೂಲಕ ಹಾಕುವ ಲಸಿಕೆಯೊಂದೇ ರಾಮಬಾಣವಾಗಲಿದೆ ಎಂದು ನಂಬಲಾಗಿದೆ.ಈಗಾಗಲೇ ಈ ಲಸಿಕೆಯ ಹನಿಗಳನ್ನು ಪ್ರಾಣಿಗಳ ಮೂಗಿನ ಮೇಲೆ ಪ್ರಯೋಗಿಸಲಾಗಿದ್ದು ಪರಿಣಾಮಕಾರಿಯಾಗಿದೆ.
ಮೂಗಿನಲ್ಲಿ ಲಸಿಕೆ ಹಾಕಿಸಿಕೊಂಡ ಪ್ರಾಣಿಗಳನ್ನು ಪರಸ್ಪರ ಭೇಟಿ ಮಾಡಿಸಿದ ವೇಳೆ ಒಂದರಿಂದ ಮತ್ತೊಂದಕ್ಕೆ ಸೋಂಕು ಹರಡಿಲ್ಲ. ಜೊತೆಗೆ ಮೂಗಿನ ಮೂಲಕ ಲಸಿಕೆ ಹಾಕಿಸಿದ ಪ್ರಾಣಿಗಳಿಗೆ ಕೊರೋನಾ ವೈರಸ್ ಅನ್ನು ಇಂಜೆಕ್ಟ್ ಮಾಡಿದ ಬಳಿಕ ಶ್ವಾಸಕೋಶ ಮತ್ತು ಮೂಗಿನಿಂದ ಹೊರ ಬರೋ ದ್ರವದಲ್ಲಿ ಕೊರೋನಾ ವೈರಸ್ ಇರಲಿಲ್ಲ. ಹೀಗಾಗಿ ಈ ಲಸಿಕೆ ಬಗ್ಗೆ ಆಶಾವಾದ ಮೂಡಿದೆ.
Discussion about this post