ನವದೆಹಲಿ : ಉಕ್ರೇನ್ ಮೇಲೆ ಮುಗಿ ಬಿದ್ದಿರುವ ರಷ್ಯಾ, ಶತಾಯಗತಾಯ ಗೆಲುವು ಕಾಣಲೇಬೇಕು ಎಂದು ಹೋರಾಡುತ್ತಿದೆ. ಅಮೆರಿಕಾವನ್ನು ನಂಬಿ ಕೆಟ್ಟಿರುವ ಉಕ್ರೇನ್ ರಷ್ಯಾ ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದೆ. ಯುಕ್ರೇನ್ ನಲ್ಲಿರುವ ಅಣುಸ್ಥಾವರದ ಮೇಲೆ ರಷ್ಯಾ ದಾಳಿ ನಡೆಸಿದ್ದು, ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಳ್ಳಲಿದೆ
ಈ ನಡುವೆ ತಟಸ್ಥ ನಿಲುವು ತಳೆದಿರುವ ಭಾರತ, ತನ್ನ ದೇಶದ ನಾಗರಿಕರನ್ನು ತವರೂರಿಗೆ ಕರೆ ತರುವ ಕಾರ್ಯದಲ್ಲಿ ನಿರತವಾಗಿದ್ದು, ಯುದ್ಧಭೂಮಿಯಿಂದ ನಾಗರಿಕರನ್ನು ತೆರವು ಮಾಡುವುದು ಸುಲಭದ ಮಾತಲ್ಲ. ಹೀಗಾಗಿ ಅಕ್ಕ ಪಕ್ಕದ ಗಡಿಗೆ ಆಗಮಿಸುವ ನಾಗರಿಕರನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ.
ಹೀಗೆ ಭಾರತಕ್ಕೆ ಮರಳಲು ಉಕ್ರೇನ್ ಗಡಿಯತ್ತ ಧಾವಿಸುತ್ತಿದ್ದ ಭಾರತದ ವಿದ್ಯಾರ್ಥಿಯೊಬ್ಬನಿಗೆ ಗುಂಡೇಟು ತಗುಲಿರುವ ಮಾಹಿತಿ ಲಭಿಸಿದೆ. ಈ ಬಗ್ಗೆ ಪೋಲೆಂಡ್ ನಲ್ಲಿ ಮಾತನಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ವಿಕೆ ಸಿಂಗ್ ಕೀವ್ ನಿಂದ ಹೊರಟಿದ್ದ ವಿದ್ಯಾರ್ಥಿ ಕಾಲಿಗೆ ಗುಂಡೇಟು ತಗುಲಿದ್ದು, ಆತನನ್ನು ವಾಪಾಸ್ ಕರೆದುಕೊಂಡು ಹೋಗಲಾಗಿದೆ ಅಂದಿದ್ದಾರೆ.
Discussion about this post