ರೈಲಿನಲ್ಲಿ ಚಾಯಿ, ಕಾಫಿ, ಬ್ರೆಡ್ ಬನ್ ಮಾರಾಟಕ್ಕೆ ಅವಕಾಶ ಕೊಟ್ಟಿದ್ದ ರೈಲ್ವೆ ಇಲಾಖೆ ಇದೀಗ ಪ್ರಯಾಣಿಕರ ಪ್ರಯಾಣ ಸುಖಕರವಾಗಿರಲಿ ಎಂದು ಮಸಾಜ್ ಸೇವೆ ಕೊಡಲು ನಿರ್ಧರಿಸಿದೆ.
ಪಶ್ಚಿಮ ರೈಲ್ವೆ ವಲಯದ ರತ್ಲಾಮ್ ವಿಭಾಗದಿಂದ ರೈಲಿನಲ್ಲಿ ಮಸಾಜ್ ಸೌಲಭ್ಯ ಕಲ್ಪಿಸಬೇಕೆಂದು ಬಂದ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸಿರುವ ರೈಲ್ವೆ ಇಲಾಖೆ ಇದೀಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕರಿಗೆ ಮಸಾಜ್ ಸೇವೆ ಒದಗಿಸಲು ನಿರ್ಧರಿಸಿದೆ.
ಪ್ರಾಥಮಿಕ ಹಂತದಲ್ಲಿ ಈ ಸೌಲಭ್ಯವನ್ನು ಇಂದೋರ್ ನಿಂದ ಹೊರಡುವ 39 ರೈಲುಗಳಲ್ಲಿ ಕಲ್ಪಿಸಲಾಗಿದೆ ಎಂದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಪಾದಗಳ ಮಸಾಜ್ ಹಾಗೂ ತಲೆ ಮಸಾಜ್ ಗಳ ಸೇವೆಗೆ 100 ರೂ.ದರವನ್ನು ನಿಗದಿಪಡಿಸಲಾಗಿದೆ.
ಈ ಸಂಬಂಧ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದ್ದು, ಈ ಸೇವೆಯಿಂದ ರೈಲ್ವೆಗೆ ವಾರ್ಷಿಕವಾಗಿ ರೂ 20 ಲಕ್ಷ ಹೆಚ್ಚುವರಿ ಆದಾಯ ಲಭ್ಯವಾಗಲಿದೆ. ಅಲ್ಲದೆ 20,000 ಮಸಾಜ್ ಸೇವಾಕರ್ತರು ರೈಲ್ವೆ ಟಿಕೆಟ್ ಪಡೆದುಕೊಳ್ಲುವುದರಿಂದ ವಾರ್ಷಿಕ 90 ಲಕ್ಷ ರೂ. ಹೆಚ್ಚುವರಿ ಟಿಕೆಟ್ ಮಾರಾಟವಾಗುವ ನಿರೀಕ್ಷೆ ಇದೆ.
Discussion about this post