ನವದೆಹಲಿ : ಜಾಗತಿಕ ಕಂಪನಿಗಳಲ್ಲಿ ಇದೀಗ ಭಾರತೀಯ ಮೂಲದ ಸಾಧಕರು ಸದ್ದು ಮಾಡಲಾರಂಭಿಸಿದ್ದಾರೆ. ಹಲವು ಕಂಪನಿಗಳ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಭಾರತೀಯರು ಯಶಸ್ಸು ಕಾಣುತ್ತಿದ್ದಾರೆ. ಈಗಾಗಲೇ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಸತ್ಯ ನಾದೆಳ್ಲ, ಗೂಗಲ್ ನಲ್ಲಿ ಸುಂದರ್ ಪಿಚ್ಚೈ, ಪೆಪ್ಸಿಕೋ ದಲ್ಲಿ ಇಂದಿರಾ ನೂಯಿ, ಗ್ಲೋಬಲ್ ಫೌಂಡರೀಸ್ ನಲ್ಲಿ ಸಂಜಯ್ ಝಾ, ಮಾಸ್ಟರ್ ಕಾರ್ಡ್ ನಲ್ಲಿ ಅಜಯ್ ಪಾಲ್ ಸಿಂಗ್ ಬಂಗ, ನೋಕಿಯಾದಲ್ಲಿ ಸಂಜಯ್ ಸೂರಿ ಮತ್ತು ಅಡೋಬ್ ನಲ್ಲಿ ಶಂತನು ನಾರಾಯಣ್ ಪ್ರಮುಖ ಅಧಿಕಾರಿ ಸ್ಥಾನದಲ್ಲಿದ್ದಾರೆ.
ಈ ಸಾಲಿಗೆ ಹೊಸ ಸೇರ್ಪಡೆ ಪರಾಗ್ ಅಗ್ರವಾಲ್. ಟ್ವೀಟರ್ ಸಂಸ್ಥೆ ತನ್ನ ನೂತನ CEO ಆಗಿ ಭಾರತೀಯ ಮೂಲಕ ಪರಾಗ್ ರನ್ನು ನೇಮಿಸಿದೆ. ಭಾರತದಲ್ಲಿ ಜನಿಸಿದ ಪರಾಗ್ ಪ್ರಾರಂಭಿಕ ಶಿಕ್ಷಣವನ್ನು ಭಾರತದಲ್ಲೇ ಮುಗಿಸಿದ್ದಾರೆ. ಬಾಂಬೆಯ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಪರಾಗ್, ಅಮೆರಿಕಾ ಸ್ಪ್ಯಾನ್ ಫೋರ್ಡ್ ವಿವಿಯಲ್ಲಿ PhDಯನ್ನು ಪಡೆದಿದ್ದಾರೆ.
PhD ಅಧ್ಯಯನ ಸಮಯದಲ್ಲೇ ಮೈಕ್ರೋಸಾಫ್ಟ್, ಎಟಿಟಿ, ಯಾಹೂ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಹಿರಿಮೆ ಇವರದ್ದು. 2011ರಲ್ಲಿ ADD ಇಂಜಿನಿಯರ್ ಟ್ವೀಟರ್ ಸೇರಿದ ಪರಾಗ್, ಪ್ರೋಗ್ರಾಮ್ ಇಂಜಿನಿಯರ್ ಆಗಿ ಭಡ್ತಿ ಪಡೆದಿದ್ದರು. 2018ರಲ್ಲಿ CTO ಹುದ್ದೆಗೇರಿದ ಪರಾಗ್ ಇದೀಗ CEO ಪಟ್ಟ ಅಲಂಕರಿಸಿದ್ದಾರೆ.
ಈ ಹಿಂದೆ CEO ಆಗಿದ್ದ ಟ್ವೀಟರ್ ಸಂಸ್ಥಾಪಕ ಡೋರ್ಸಿ ಅವರನ್ನು ಬಲವಂತವಾಗಿ ಹುದ್ದೆಯಿಂದ ಕಿತ್ತು ಹಾಕಲಾಗಿದೆ ಅನ್ನಲಾಗಿದೆ. ಟ್ವೀಟರ್ ವಿಷಯದಲ್ಲಿ ಡೋರ್ಸಿ ಆಸಕ್ತಿ ವಹಿಸುತ್ತಿಲ್ಲ ಅನ್ನುವ ಆರೋಪವಿತ್ತು. ಆದರೆ ಈ ಬಗ್ಗೆ ರಿಯಾಕ್ಷನ್ ಕೊಟ್ಟಿರುವ ಡೋರ್ಸಿ, ಇದು ಹುದ್ದೆ ತ್ಯಜಿಸುವ ಸಮಯ ಅನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಹೀಗಾಗಿ 16 ವರ್ಷ ನಿರ್ವಹಿಸಿದ್ದ ಹುದ್ದೆಯನ್ನು ಬೇರೆಯವರಿಗೆ ವಹಿಸಿದ್ದೇನೆ ಅಂದಿದ್ದಾರೆ.
Discussion about this post