ನವದೆಹಲಿ : ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯನ್ನು ಘೋಷಿಸಿದಾಗ ವ್ಯಕ್ತವಾದ ವಿರೋಧವನ್ನು ಗಮನಿಸಿದರೆ ಈ ಯೋಜನೆಯ ಬಗ್ಗೆ ಸಾಕಷ್ಟು ಅನುಮಾನಗಳಿತ್ತು. ಅದ್ಯಾವುದೋ ಲೋಪವಿದೆ ಅನ್ನುವ ಶಂಕೆ ಎದ್ದಿತ್ತು. ಆದರೆ ಇದೀಗ ಅಗ್ನಿಪಥಕ್ಕೆ ಸಿಕ್ಕಿರುವ ರೆಸ್ಪಾನ್ಸ್ ಗಮನಿಸಿದರೆ ಅಚ್ಚರಿಯಾಗುತ್ತದೆ. ಮೂರೇ ದಿನದಲ್ಲಿ 57 ಸಾವಿರ ಮಂದಿ ಅಗ್ನಿವೀರರಾಗಲು ಅರ್ಜಿ ಸಲ್ಲಿಸುವ ಮೂಲಕ ದಾಖಲೆ ಬರೆದಿದ್ದಾರೆ.
ರಕ್ಷಣಾ ಇಲಾಖೆ ಅಗ್ನಿಪಥ ಯೋಜನೆ ಘೋಷಿಸಿದ ಬೆನ್ನಲ್ಲೇ ಅಂದ್ರೆ ಜೂನ್ 14 ರಂದು ಈ ಯೋಜನೆಯನ್ನು ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ವಾಯುಪಡೆ ಅಗ್ನಿವೀರರಿಗಾಗಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿತ್ತು. ಹೀಗಾಗಿ ಕಳೆದ ಮೂರು ದಿನಗಳಲ್ಲಿ 57 ಸಾವಿರ ಯುವಕರು ವಾಯುಪಡೆ ಸೇರಲು ಅರ್ಜಿ ಸಲ್ಲಿಸಿದ್ದಾರೆ. ಜುಲೈ 5ಕ್ಕೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಲಿದೆ.
Discussion about this post