ನವದೆಹಲಿ : ಅಮೆರಿಕಾದ ದತ್ತಾಂಶ ಗುಪ್ತಚರ ಸಂಸ್ಥೆಯ ಸಮೀಕ್ಷೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರ ಒಪ್ಪಿಗೆ ಸೂಚ್ಯಂಕ ಶೇ66ರಷ್ಟಿದೆ ಅಂದಿದೆ. ಈ ಮೂಲಕ ಜಾಗತಿಕ ಮುಖಂಡರನ್ನು ಹೋಲಿಸಿದರೆ ಭಾರತದ ಪ್ರಧಾನಿ ಮುಂದಿದ್ದಾರೆ. ಅಮೆರಿಕಾ ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಬ್ರೆಜಿಲ್, ಫ್ರಾನ್ಸ್ ಹಾಗೂ ಜರ್ಮನಿ ಸೇರಿ 13 ದೇಶದ ವಿಶ್ವನಾಯಕರ ಪೈಕಿ ನರೇಂದ್ರ ಮೋದಿಯವರ ದೊಡ್ಡಣ್ಣ.
ಆಗಸ್ಟ್ 2019ರಲ್ಲಿ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂದಕ್ಕೆ ಪಡೆಯುವ ಸಂದರ್ಭದಲ್ಲಿ ಅವರ ಒಪ್ಪಿಗೆ ಸೂಚ್ಯಂಕ ಶೇ82ರಷ್ಟಿತ್ತು. ಅಸಮ್ಮತಿ ಸೂಚ್ಯಂಕ ಕೇವಲ 11ರಷ್ಟಿತ್ತು.
ಇನ್ನು ಎರಡನೇ ಸ್ಥಾನದಲ್ಲಿ ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ ಇದ್ದು ಅವರು ಶೇ65ರಷ್ಟು ಸ್ಕೋರ್ ಪಡೆದಿದ್ದಾರೆ. ಇನ್ನುಳಿದವರ ಪಟ್ಟಿ ಹೀಗಿದೆ.
Discussion about this post