ಬೆಂಗಳೂರು : ಕುಟುಂಬಕ್ಕೆ ಕೊರೋನಾ ಸೋಂಕು ಕಾಡಿದ ಬಳಿಕ ಆರೋಗ್ಯದ ಕುರಿತಂತೆ ತೀವ್ರ ಕಾಳಜಿ ವಹಿಸಿರುವ ಕುಮಾರಸ್ವಾಮಿ ಬೆಂಗಳೂರಿನ ಜೆಪಿ ನಗರದ ನಿವಾಸ ತೊರೆದು, ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆ ಸೇರಿದ್ದಾರೆ.
ಕುಟುಂಬ ಸದಸ್ಯರೊಂದಿಗೆ ತೋಟದ ಮನೆಗೆ ತೆರಳಿರುವ ಅವರು ಈಗಾಗಲೇ ಅಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ಮೊನ್ನೆ ಮೊನ್ನೆ ದೇಶಿ ತಳಿಯ ಹಸುಗಳನ್ನು ತೋಟದ ಮನೆಗೆ ಬರ ಮಾಡಿಕೊಂಡಿರುವ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ರಾಜಕೀಯ ಚಟುವಟಿಕೆಯ ಬಳಿಕ ಸಿಗುವ ಬಿಡುವಿನ ವೇಳೆಯಲ್ಲಿ ಹೊಲ,ಗದ್ದೆ, ಕೆರೆ ಎಂದು ಸುತ್ತಾಡುತ್ತಿದ್ದಾರೆ. ಇದಕ್ಕೆ ಪುತ್ರ ನಿಖಿಲ್ ಹಾಗೂ ಸೊಸೆ ರೇವತಿ ಕೂಡಾ ಸಾಥ್ ಕೊಟ್ಟಿದ್ದಾರೆ.
ಈ ನಡುವೆ ಕೃಷಿ ಚಟುವಟಿಕೆ ಸಲುವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಹೊಸ ಟ್ರ್ಯಾಕ್ಟರ್ ಖರೀದಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೊಸ ಟ್ರ್ಯಾಕ್ಟರ್ ಅನ್ನು ಸ್ವಾಗತಿಸಿದ ಕುಮಾರಸ್ವಾಮಿಯವರು ತಾವೇ ಟ್ರ್ಯಾಕ್ಟರ್ ಚಲಾಯಿಸಿದ್ದು ವಿಶೇಷವಾಗಿತ್ತು.
Discussion about this post