ನವದೆಹಲಿ : ಭಾರತದ ಮೊದಲ ಮಹಿಳಾ ವೈದ್ಯ ಕದಂಬಿನಿ ಗಂಗೂಲಿ ಅವರಿಗೆ ಗೂಗಲ್ ಡೂಡಲ್ ಇಂದು ವಿಶೇಷ ಗೌರವ ಸಲ್ಲಿಸಿದೆ. ಇಂದು ಕದಂಬಿನಿ ಗಂಗೂಲಿ ಅವರ 160ನೇ ಜನ್ಮದಿನದ ಸಂಭ್ರಮ. ಈ ಹಿನ್ನಲೆಯಲ್ಲಿ ಈ ಗೌರವ ಸಲ್ಲಿಸಲಾಗಿದೆ.
1861ರ ಜುಲೈ 18 ರಂದು ಜನಿಸಿದ ಕದಂಬಿನಿ 1884ರಲ್ಲಿ ಕೊಲ್ಕತ್ತಾದ ವೈದ್ಯಕೀಯ ಕಾಲೇಜಿಗೆ ಪ್ರವೇಶ ಮಾಡಿದ ಮೊದಲ ಮಹಿಳೆ ಎಂದು ಗೌರವ ಪಡೆದಿದ್ದರು. ಇಲ್ಲೇ ವೈದ್ಯಕೀಯ ಶಾಸ್ತ್ರ ಅಧ್ಯಯನ ಮಾಡಿದ ಇವರು ಭಾರತದ ಮೊದಲ ವೈದ್ಯ ಅನ್ನುವ ಹೆಗ್ಗಳಿಕೆಗೆ ಪಾತ್ರವಾದರು.
Discussion about this post