ಉಡುಪಿ : ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಜಾವಲಿನ್ ಎಸೆದು ಚಿನ್ನ ಗೆದ್ದ ನೀರಜ್ ಚೋಪ್ರಾ ತಮ್ಮ ಗುರು ಕಾಶಿನಾಥ್ ಅವರನ್ನು ಭೇಟಿಯಾಗಿದ್ದಾರೆ. ಪುಣೆಯ ಕೋರೆಗಾಂವ್ ನಲ್ಲಿರುವ ಕಾಶೀನಾಥ್ ಅವರ ಮನೆಗೆ ಭೇಟಿ ಕೊಟ್ಟ ಚೋಪ್ರಾ ಗುರು ಹಾಗೂ ಅವರ ಮನೆಯವರೊಂದಿಗೆ ಸಾಕಷ್ಟು ಹೊತ್ತು ಕಳೆದಿದ್ದಾರೆ.
ಇದನ್ನೂ ಓದಿ : ನೀರಜ್ ಚೋಪ್ರಾಗೆ ಕಾಶಿನಾಥ್ ಕೋಚ್ ಅಲ್ಲ : 10 ಲಕ್ಷ ಬಹುಮಾನಕ್ಕೆ ಶುರುವಾಯ್ತು ತಗಾದೆ
ಈ ಹಿಂದೆ ನೀರಜ್ ಚೋಪ್ರಾ ನನ್ನ ಬಳಿಯೂ ತರಬೇತಿ ಪಡೆದಿದ್ದರು, ಆಗ್ಲೇ ಅವನು ಚಿನ್ನ ಗೆಲ್ಲುವ ವಿಶ್ವಾಸವಿತ್ತು ಎಂದು ಕಾಶೀನಾಥ್ ಹೇಳಿದ್ದರು. ಇದೇ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಕಾಶೀನಾಥ್ ಅವರಿಗೆ ಗೌರವ ಪೂರ್ವಕವಾಗಿ 10 ಲಕ್ಷ ರೂಪಾಯಿ ನೀಡುವುದಾಗಿ ಕರ್ನಾಟಕ ಘೋಷಿಸಿತ್ತು. ಇದು ಹಲವರ ಕಣ್ಣು ಕೆಂಪಾಗಿಸಿತ್ತು. ಕಾಶೀನಾಥ್ ಯಾರು ಅಂತಾ ಗೊತ್ತೇ ಇಲ್ಲ, ಅವರಿಗೆ ಆ ಹೆಸರಿನ ಗುರುವೇ ಇರಲಿಲ್ಲ ಅಂದಿದ್ದರು. ಇದಕ್ಕೆ ಪ್ರತಿಯಾಗಿ ಈ ಬಗ್ಗೆ ನೀರಜ್ ಅವರೇ ಮಾತನಾಡ್ಲಿ ಎಂದು ಕಾಶೀ ಮೌನಕ್ಕೆ ಶರಣಾಗಿದ್ದರು.
ಇದನ್ನೂ ಓದಿ : ನೀರಜ್ ಚೋಪ್ರಾ ಚಿನ್ನದ ಸಾಧನೆಯ ಹಿಂದಿದೆ ಕನ್ನಡಿಗನೊಬ್ಬನ ಪರಿಶ್ರಮ
ಇದೀಗ ಕಾಶೀನಾಥ್ ಮನೆಗೆ ನೀರಜ್ ಚೋಪ್ರಾ ಭೇಟಿ ನೀಡುವ ಮೂಲಕ ಕಾಶೀನಾಥ್ ಅಂದ್ರೆ ಯಾರು ಅಂತಾ ಗೊತ್ತೇ ಇಲ್ಲ ಅಂದವರಿಗೆ ತಿರುಗೇಟು ಕೊಟ್ಟಿದ್ದಾರೆ. ಪ್ರಸ್ತುತ ಕಾಶೀನಾಥ್ ಅವರು ಪುಣೆಯ ಸೇನಾ ಕ್ರೀಡಾ ಇನ್ಸಿಟ್ಯೂಟ್ ನಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ ಕನ್ನಡ ಶಿರಸಿಯ ಬೆಂಗಳೆ ಗ್ರಾಮದ ಕಾಶೀನಾಥ್ 2015ರಿಂದ 2017 ನೀರಜ್ ಚೋಪ್ರಾ ಅವರಿಗೆ ತರಬೇತಿ ನೀಡಿದ್ದರು. ಈ ವೇಳೆ ಅವರ ಸಾಧನೆಯನ್ನು ಕಂಡು ವಿದೇಶಿ ತರಬೇತುದಾರರ ಬಳಿಗೆ ಕರೆದೊಯ್ಯಲಾಗಿತ್ತು
Discussion about this post