ಕಳೆದ ವರ್ಷವೂ Ganesh Chaturthi ವೇಳೆ ಇಂತಹುದೇ ಆದೇಶ ಬಂದ ವೇಳೆ ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿತ್ತು. ಈ ಬಾರಿಯೂ ಮತ್ತೆ ಪ್ರತಿಭಟನೆಗಳ ಸಾಧ್ಯತೆಗಳಿದೆ
ಬೆಂಗಳೂರು : ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಗಣೇಶೋತ್ಸವವನ್ನು (Ganesh Chaturthi ) ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿ ಕೊರೋನಾ ಅಬ್ಬರ ಕಡಿಮೆಯಾಗಿರುವ ಕಾರಣ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲು ಅನೇಕ ಸಮಿತಿಗಳು ತೀರ್ಮಾನಿಸಿದೆ.
ಈ ನಡುವೆ ಈ ಬಾರಿಯೂ ವಾರ್ಡ್ ಗೆ ಒಂದೇ ಗಣೇಶ ಅನ್ನುವ ನಿಯಮ ಹೊರ ತರಲು ಬೆಂಗಳೂರು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಈ ಸಂಬಂಧ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಬಾರಿ ವಾರ್ಡ್ ಗೆ ಒಂದೇ ಗಣೇಶ ಕೂರಿಸಬೇಕು ಅಂದಿದ್ದಾರೆ.
ಇದನ್ನು ಓದಿ : Bhanwar Singh Meena : ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಕೊಡಗು ಜಿಪಂ ಸಿಇಒ ಪತ್ನಿ
ಜೊತೆಗೆ ಯಾವುದೇ ಕಾರಣಕ್ಕೂ POP ಗಣೇಶನ ವಿಗ್ರಹ ಮಾರುವ ಹಾಗಿಲ್ಲ, POP ಗಣೇಶನ ವಿಗ್ರಹ ಕೂರಿಸುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ವಾರ್ಡ್ ಗೆ ಒಂದೇ ಗಣೇಶ ಅನ್ನುವ ಆದೇಶಕ್ಕೆ ಹಿಂದೂ ಸಂಘಟನೆಗಳಿಂದ ಈ ಬಾರಿ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿದೆ. ಬಿಬಿಎಂಪಿಯ ಈ ನಿರ್ಧಾರದಿಂದ ಬಿಜೆಪಿ ಸರ್ಕಾರ ಮತ್ತೆ ಹಿಂದೂ ವಿರೋಧಿ ಅನ್ನುವ ಟೀಕೆಗೆ ಗುರಿಯಾದರೂ ಅಚ್ಚರಿ ಇಲ್ಲ. ಕಳೆದ ವರ್ಷವೂ ಹೀಗೆ ಆದೇಶ ಮಾಡಿದ ಸಂದರ್ಭದಲ್ಲಿ ದೊಡ್ಡ ಮಟ್ಟದ ಹೋರಾಟಗಳಾಗಿತ್ತು. ಚುನಾವಣಾ ವರ್ಷದಲ್ಲಿ ಸರ್ಕಾರ ಮತ್ತೆ ಈ ಬಾರಿಯೂ ಇಕ್ಕಟಿಗೆ ಸಿಲುಕುವುದು ಗ್ಯಾರಂಟಿ.
Discussion about this post