ಬಿಟ್ಟಿ ಭಾಗ್ಯ, ಭರವಸೆ ಗ್ಯಾರಂಟಿಯ ಬದಲು ಇಂತಹ ಯೋಜನೆಗಳು ಸರ್ಕಾರಿ ಶಾಲಾ ಮಕ್ಕಳಿಗೆ ಜಾರಿಯಾದರೆ ಚೆಂದ
ತಮಿಳುನಾಡು ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶಾಲೆಯಲ್ಲೇ ಬ್ರೇಕ್ ಫಾಸ್ಟ್ ನೀಡುವ ಯೋಜನೆ ಜಾರಿಗೆ ತಂದಿದೆ. ಇನ್ನು ಮುಂದೆ ತಮಿಳುನಾಡಿನ ಸರ್ಕಾರಿ ಶಾಲೆಯಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗ್ಗಿನ ಉಪಹಾರ ಸಿಗಲಿದೆ.

ಹಾಗೇ ನೋಡಿದರೆ National Programme of Nutritional Support to Primary Education (NP-NSPE) ಕಾರ್ಯಕ್ರಮ 1995ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಾರಂಭಗೊಂಡಿತ್ತು. ಈಗ ಇದೇ ಯೋಜನೆಯನ್ನು pm poshan ಎಂದು ಕರೆಯಲಾಗುತ್ತಿದೆ. ಈ ಯೋಜನೆ ಜಾರಿಗೂ ಮುನ್ನ ಅಂದ್ರೆ 1920ರಲ್ಲಿ ತಮಿಳುನಾಡಿನಲ್ಲಿ ಮಧ್ಯಾಹ್ನದ ಬಿಸಿಯೂಟ ಜಾರಿಗೆ ಬಂದಿತ್ತು. 1996 ರಿಂದ 2001ರಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ತಮಿಳುನಾಡಿನಲ್ಲಿ ಜಾರಿಯಲ್ಲಿತ್ತು. 2006ರಲ್ಲಿ ವಾರದ ಐದು ದಿನ ಮೊಟ್ಟೆ ನೀಡುವ ಯೋಜನೆ ಜಾರಿ ತರಲಾಯಿತು.
ಇನ್ನು ಉಪಹಾರ ನೀಡುವ ಯೋಜನೆಯನ್ನು ತಮಿಳುನಾಡು ಸರ್ಕಾರ 2021ರಲ್ಲಿ ಪ್ರಾರಂಭಿಸಿತ್ತು. ಪೈಲೆಟ್ ಯೋಜನೆಯಂತೆ ಕೆಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಉಪಹಾರ ಲಭ್ಯವಿತ್ತು. ಇದೀಗ ಇದನ್ನು ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿಸ್ತರಿಸಲಾಗಿದೆ.
ಈ ಸ್ಕೀಂನಿಂದ 17 ಲಕ್ಷಕ್ಕೂ ಅಧಿಕ ಮಕ್ಕಳು ಬೆಳಗಿನ ಉಪಹಾರ ಸೇವಿಸಲಿದ್ದು. ಬೆಳಗ್ಗಿನ ಉಪಹಾರ ಸ್ಕೀಂನಿಂದ ಮಕ್ಕಳ ಹಾಜರಾತಿ ಕೂಡಾ ಹೆಚ್ಚಾಗುವ ವಿಶ್ವಾಸವಿದೆ.
Discussion about this post