ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ನೂತಲ ಸಲಹೆಗಾರರಾಗಿ ನಿವೃತ ಐಎಎಸ್ ಅಧಿಕಾರಿ ಅಮಿತ್ ಖರೆ ಅವರನ್ನು ನೇಮಿಸಲಾಗಿದೆ. ಕ್ಯಾಬಿನೇಟ್ ನೇಮಕಾತಿ ಸಮಿತಿಯ ಅನುಮೋದನೆ ಹಾಗೂ ಅಧಿಕೃತ ಆದೇಶದ ಪ್ರಕಾರ ಅವರನ್ನು ನಿಯೋಜನೆ ಮಾಡಲಾಗಿದೆ.
ಅಮಿತ್ ಖರೆ 1985ರ ಬ್ಯಾಚ್ ನ ಜಾರ್ಖಂಡ್ ಕೇಡರ್ ನ ಐಎಎಸ್ ಅಧಿಕಾರಿ. ಐಐಎಂ ಅಹಮದಾಬಾದ್ ನಿಂದ ಎಂಬಿಎ ಪದವಿ ಪಡೆದಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅಮಿತ್ ಖರೆ, ಕಳೆದ ತಿಂಗಳಷ್ಟೇ ಐಎಎಸ್ ನಿಂದ ನಿವೃತ್ತಿ ಹೊಂದಿದ್ದರು.
ಎರಡು ವರ್ಷದ ಗುತ್ತಿಗೆ ಆಧಾರದಲ್ಲಿ ಅವರು ನೇಮಕಗೊಂಡಿದ್ದು, ಕೇಂದ್ರ ಸರ್ಕಾರದ ಕಾರ್ಯದರ್ಶಿ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. National Education Policy 2020 ಯನ್ನು ತರುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.
Discussion about this post