ಜಪಾನ್ : ಕೊರೋನಾ ಆತಂಕದ ನಡುವೆ ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಜಪಾನ್ ಸರ್ಕಾರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಲು ಭರ್ಜರಿ ಸಿದ್ದತೆ ನಡೆಸಿಕೊಳ್ಳುತ್ತಿದೆ.
ಇದರ ಮುಂದುವರಿದ ಭಾಗವಾಗಿ ಒಲಿಂಪಿಕ್ ಸಮಿತಿ ಮತ್ತು ಜಪಾನ್ ಸರ್ಕಾರ ಪ್ರೇಕ್ಷಕರು ಹಾಗೂ ಕ್ರೀಡಾಪಟುಗಳು ಹೇಗಿರಬೇಕು ಅನ್ನುವ ಕುರಿತಂತೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಮಾರ್ಗಸೂಚಿಯಲ್ಲಿ ಕ್ರೀಡಾಪಟುಗಳು ಜಪಾನ್ ನಲ್ಲಿ ಬಂದು ಇಳಿದ ಕ್ಷಣದಿಂದ, ದೇಶ ಬಿಡೋ ತನಕ ಏನು ಮಾಡಬೇಕು, ಏನು ಮಾಡಬಾರದು ಅನ್ನುವುದನ್ನು ವಿವರಿಸಲಾಗಿದೆ.
ಕ್ರೀಡಾಪಟುಗಳು ಆಹಾರ ಸೇವನೆ, ನಿದ್ದೆ ಬಿಟ್ಟು ಉಳಿದ ಎಲ್ಲಾ ಸಂದರ್ಭಗಳಲ್ಲಿ ಮಾಸ್ಕ್ ಧರಿಸೋದು ಕಡ್ಡಾಯ ಮಾಡಲಾಗಿದೆ.
ಜೊತೆಗೆ ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಲುವಾಗಿ ಘೋಷಣೆ ಕೂಗುವಂತಿಲ್ಲ, ಹಾಡು ಹಾಡೋ ಹಾಗಿಲ್ಲ ಅಂದಿದೆ. ಆದರೆ ಕ್ರೀಡಾಂಗಣಕ್ಕೆ ಎಷ್ಟು ಪ್ರಮಾಣದಲ್ಲಿ ಪ್ರೇಕ್ಷಕರನ್ನು ಬಿಡಲಾಗುತ್ತದೆ ಅನ್ನುವ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿದೆ.
Discussion about this post