ದೇವಸ್ಥಾನದಲ್ಲಿ ಪ್ರಾರ್ಥನೆ, ಬಾರ್ ನಲ್ಲಿ ಚರ್ಚೆ ಶಾಲೆಯಲ್ಲಿ ಸ್ಕೆಚ್ : ಅಮಾಯಕನೊಬ್ಬನನ್ನು ಕೊಂದ ಪಾಪಿಗಳು (fazil murder case)
ಮಂಗಳೂರು : ಕರಾವಳಿಯಲ್ಲಿ ತಲ್ಲಣ ಮೂಡಿಸಿದ್ದ ಸುರತ್ಕಲ್ ನ ಮೊಹಮ್ಮದ್ ಪಾಝಿಲ್ (23) ಹತ್ಯೆ ಪ್ರಕರಣದ ಕಿರಾತಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. (Fazil murder case)ಮೂವರು ರೌಡಿ ಶೀಟರ್ ಸೇರಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮೊಹಮ್ಮದ್ ಪಾಝಿಲ್ ಗೆ ಯಾವುದೇ ಸಂಘಟನೆಯಾಗಲಿ,ಯಾವುದೇ ಕೃತ್ಯಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. (Fazil murder case) ತಾನಾಯ್ತು, ತನ್ನ ಕೆಲಸವಾಯ್ತು ಅಂದುಕೊಂಡಿದ್ದ. ಹೀಗಾಗಿ ಜುಲೈ 28 ರಂದು ನಡೆದ ಅಮಾಯಕನೊಬ್ಬನ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಈ ಕೊಲೆ ನಡೆದ ಕಾರಣ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.
ಇದನ್ನೂ ಓದಿ : lathi charge : ಹೊಡೆಯಿರಿ.. ಹೊಡೆಯಿರಿ… ಪೊಲೀಸರ ಲಾಠಿಗೆ ಎದೆಯೊಡ್ಡಿದ ಕಾಸರಗೋಡು ಬಿಜೆಪಿ ನೇತಾರ
ಇದೀಗ ಘಟನೆಗೆ ಸಂಬಂಧಿಸಿದಂತೆ ಬಜಪೆಯ ಸುಹಾಸ್ ಶೆಟ್ಟಿ (29) ಗಿರಿಧರ್ (23), ಅಭಿಷೇಕ್ (21), ಶ್ರೀನಿವಾಸ್ (23) ಮತ್ತು ದೀಕ್ಷಿತ್ (21) ಅನ್ನುವವರನ್ನು ಬಂಧಿಸಲಾಗಿದೆ. ಈ ಪೈಕಿ ಮೂವರು ರೌಡಿ ಶೀಟರ್ ಗಳಾಗಿದ್ದು, ಉಳಿದ 3 ಮಂದಿಯ ಮೇಲೆಯೂ ನಾನಾ ಘಟನೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಕೃತ್ಯಕ್ಕೆ ಸಾಥ್ ನೀಡಿದ್ದ ಮತ್ತೊಂದಿಷ್ಟು ಮಂದಿಯ ಬಂಧನವಾಗಬೇಕಾಗಿದೆ.
ಜುಲೈ 26 ರ ರಾತ್ರಿ ಸುಹಾಸ್ ಶೆಟ್ಟಿ ಕೊಲೆಯ ಯೋಚನೆ ಬಂದಿತ್ತು. ಮರು ದಿನ ಮಧ್ಯಾಹ್ನ ಸ್ನೇಹಿತನಿಗೆ ಕರೆ ಮಾಡಿದ್ದ ತಿಳಿಸಿದ್ದ, ಜೊತೆಗೆ ಇದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಕೂಡಾ ಮಾಡಿಕೊಂಡಿದ್ದ. ಜುಲೈ 27 ರಂದು ಮತ್ತೊಬ್ಬ ಸ್ನೇಹಿತ ಗಿರಿಧರನನ್ನು ಕರೆಸಿಕೊಂಡು ಸುಹಾಸ್ ಹತ್ಯೆಗೆ ಬೇಕಾಗಿರುವ ಆಯುಧ ನನ್ನ ಬಳಿ ಇದೆ. ಸುರತ್ಕಲ್ ನಲ್ಲೇ ಹೆಣ ಬೀಳಬೇಕು ಅಂದಿದ್ದ. ಇದಾದ ಬಳಿಕ ಮೋಹನ್, ಅಭಿಷೇಕ, ಶ್ರೀನಿವಾಸ, ದೀಕ್ಷಿತ್ ಜೊತೆಯಾಗಿದ್ದರು.

ಈ ನಡುವೆ ಅಜಿತ್ ಕ್ರಾಸ್ತಾ ಅನ್ನುವವನಿಂದ ಕಾರು ಪಡೆದು ಜುಲೈ 27 ರಂದು ಕಾರಿಂಜ ದೇವಸ್ಥಾನಕ್ಕೆ ತೆರಳಿದ್ದರು. ಬಳಿಕ ಮಂಗಳೂರು ವಾಪಾಸ್ ಬಂದು ಪ್ರಕರಣವೊಂದರ ಸಂಬಂಧ ಕೋರ್ಟ್ ಗೆ ಹಾಜರಾಗಿದ್ದರು. ಇದಾದ ನಂತ್ರ ಖಾಸಗಿ ಪ್ರಾಥಮಿಕ ಶಾಲೆಯೊಂದರ ಬಳಿ ಚರ್ಚೆ ನಡೆಸಿ ಕೊಲೆಗೆ ಅಂತಿಮ ಸ್ಕೆಚ್ ಹಾಕಿದ್ದರು.
ಇದಕ್ಕಾಗಿ 6 ಮಂದಿಯನ್ನು ಗುರುತಿಸಿಕೊಂಡ ದುಷ್ಕರ್ಮಿಗಳು ಕೊನೆಗೆ ಪಾಝಿಲ್ ಹೆಸರನ್ನು ಫೈನಲ್ ಮಾಡಿದ್ದಾರೆ. ಮಧ್ಯಾಹ್ನ ಕಿನ್ನಿಗೋಳಿಯ ಬಾರ್ ಗೆ ತೆರಳಿ ಊಟ ಮುಗಿಸಿ ಅಲ್ಲಿಂದ ಸುರತ್ಕಲ್ ಗೆ ಬಂದು ಮರು ದಿನ ಈ ಕೃತ್ಯ ಎಸಗಿದ್ದರು.
ಇನ್ನು ಪಾಝಿಲ್ ಹತ್ಯೆಯ ಬೆನ್ನಲ್ಲೇ ಇದೊಂದು ಪ್ರೇಮ ಪ್ರಕರಣ, ಕೌಟಿಂಬಿಕ ಮನಸ್ತಾಪ ಅನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ ಈ ಎಲ್ಲಾ ವಿಚಾರಗಳನ್ನು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ನಿರಾಕರಿಸಿದ್ದು, ಕೊಲ್ಲಬೇಕು ಅನ್ನುವ ಉದ್ದೇಶದಿಂದ ಕೊಲೆ ಮಾಡಲಾಗಿದೆ. ಕೊಲೆಯ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿತ್ತು. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಇನ್ನು ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ ಈ ಹಿಂದೆ ಭಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ 2020ರ ಕೊಲೆ ಪ್ರಕರಣದಲ್ಲಿ ಈತನ ಹೆಸರು ಕೇಳಿ ಬಂದ ಕಾರಣ ಸಂಘಟನೆಯಿಂದ ಈತನನ್ನು ಉಚ್ಛಾಟಿಸಲಾಗಿತ್ತು. ಇನ್ನು ಉಳಿದವರು ಯಾವ ಸಂಘಟನೆ ಜೊತೆಗೆ ನಂಟು ಹೊಂದಿದ್ದರು ಅನ್ನುವುದು ಪೊಲೀಸರ ವಿಚಾರಣೆಯಿಂದ ಹೊರಬರಬೇಕಾಗಿದೆ.
Discussion about this post