ಗೆಳೆಯನಿಗೆ ಅಂತಿಮ ನಮನ ಸಲ್ಲಿಸಲು ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಸರ್ಕಾರವೇ ಲಾಠಿ ರುಚಿ (lathi charge)ತೋರಿಸಿದೆ. ಈ ವೇಳೆ ಕೇರಳ ಬಿಜೆಪಿ ಮುಖಂಡ ತೋರಿದ ನಡೆ ವೈರಲ್ ಆಗಿದೆ
ಮಂಗಳೂರು : ಇಷ್ಟು ದಿನಗಳ ಕಾಲ ಬಿಜೆಪಿ ಕಾರ್ಯಕರ್ತರು ಪ್ರತಿಪಕ್ಷಗಳ ವಿರುದ್ಧ ಘೋಷಣೆ ಕೂಗ್ತಾ ಇದ್ರು. ಎದುರಾಳಿ ನಾಯಕನಿಗೆ ಧಿಕ್ಕಾರ ಹಾಕ್ತಾ ಇದ್ರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಗೆಲ್ಲಿಸಿದ ಪಕ್ಷಕ್ಕೆ, ಗೆಲ್ಲಿಸಿದ ನಾಯಕನಿಗೆ ಧಿಕ್ಕಾರ ಕೂಗುವ ಪರಿಸ್ಥಿತಿ ಬಂದಿದೆ.(lathi charge)
ಈ ನಡುವೆ ಪ್ರವೀಣ್ ನೆಟ್ಟಾರು ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆಯೇ ಲಾಠಿಜಾರ್ಜ್ (lathi charge) ನಡೆದಿರುವುದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಅದರಲ್ಲೂ ಈ ಲಾಠಿ ಜಾರ್ಜ್ ಸಂದರ್ಭದಲ್ಲಿ ಕೇರಳದ ಬಿಜೆಪಿ ಮುಖಂಡರೊಬ್ಬರು ತೋರಿದ ಪ್ರತಿರೋಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೊಡೆಯುವುದಾದ್ರೆ ಹೊಡಿ ಯೂನಿಫಾರ್ಮ್ ಹಾಕಿ ಹೊಡಿ ಎಂದು ಆಕ್ರೋಶಭರಿತಾಗಿ ಹೇಳಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ : Navyashree : ಆಸ್ಪತ್ರೆ ಊಟ ಬೇಡ… ಚಿಕನ್ ಬಿರಿಯಾನಿ ಬೇಕು : ನವ್ಯಶ್ರೀ ಕಿರಿಕ್ ಗೆ ಸುಸ್ತಾದ ವೈದ್ಯರು ಮತ್ತು ಪೊಲೀಸರು
ಅಂದ ಹಾಗೇ ಹೀಗೆ ಪೊಲೀಸರ ಲಾಠಿಗೆ ಎದೆಯೊಡ್ಡಿ ನಿಂತವರು ಕಾಸರಗೋಡಿನ ಸಂಘ ಪರಿವಾರದ ನೇತಾರ, ಕಾಸರಗೋಡು ಜಿಲ್ಲಾ ಬಿಜೆಪಿ ನಾಯಕನಾಗಿರುವ ಇವರು, ಕಾಸರಗೋಡು ನಗರಸಭೆಯ ವಿಪಕ್ಷ ನಾಯಕ ಪಿ.ರಮೇಶ್
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಅನಂತ ಕುಮಾರ್ ಹೆಗಡೆ ಜೊತೆಯಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದ ಇವರನ್ನು ಕಾಸರಗೋಡಿನಲ್ಲಿ ಹುಬ್ಬಳ್ಳಿ ರಮೇಶ್ ಎಂದೇ ಕರೆಯಲಾಗುತ್ತದೆ.

ಒಟ್ಟಿನಲ್ಲಿ ದೂರದ ಕೇರಳದಿಂದ ತನ್ನದೇ ಪಕ್ಷದ ಕಾರ್ಯಕರ್ತನೊಬ್ಬನಿಗೆ ನಮನ ಸಲ್ಲಿಸಲು ಬಂದು ಲಾಠಿ ರುಚಿ ನೋಡುವಂತಾಗಿದ್ದು ವಿಪರ್ಯಾಸವೇ ಸರಿ. ಕೇರಳದ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದ ರಮೇಶ್ ಈ ರೀತಿ ಲಾಠಿ ರುಚಿ ನೋಡಿರಲು ಸಾಧ್ಯವೇ ಇಲ್ಲ.
ಇದನ್ನೂ ಓದಿ : Haveri Temple : ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಬಂಧನ
Discussion about this post