ಇಸ್ಲಾಮಾಬಾದ್ : ಪಾಕಿಸ್ತಾನದ ಹಿರಿಯ ಪರಮಾಣು ವಿಜ್ಞಾನಿ ಡಾ ಅಬ್ದುಲ್ ಖಾದೀರ್ ಖಾನ್ (85) ( Abdul Qadeer Khan) ಇಸ್ಲಾಮಾಬಾದ್‌ನಲ್ಲಿ ಭಾನುವಾರ ನಿಧನ ಹೊಂದಿದ್ದಾರೆ.
ಎ.ಕೆ ಖಾನ್ ಎಂದೇ ಖ್ಯಾತರಾಗಿದ್ದ Abdul Qadeer Khan ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದರು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಅಣ್ವಸ್ತ್ರ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಖಾನ್ Father of Pakistan’s nuclear bomb’ ( ಪಾಕಿಸ್ತಾನದ ಅಣ್ವಸ್ತ್ರ ಯೋಜನೆ ಪಿತಾಮಹ ) ಎಂದೇ ಕರೆಸಿಕೊಂಡಿದ್ದರು.
ಕೊರೋನಾ ಸೋಂಕಿಗೆ ತುತ್ತಾಗಿದ್ದ ಖಾನ್ ಆಗಸ್ಟ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಈ ವೇಳೆ ಪಾಕಿಸ್ತಾನ ಸರ್ಕಾರ ಖಾನ್ ಆರೋಗ್ಯದ ಬಗ್ಗೆ ಕಾಟಾಚಾರಕ್ಕೂ ವಿಚಾರಿಸಿ ಇರಲಿಲ್ಲ. ಇದು ಅವರ ಅಸಮಾಧಾನಕ್ಕೂ ಕಾರಣವಾಗಿತ್ತು. ಇದಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ ಅವರ ಆರೋಗ್ಯ ಮತ್ತೆ ಕೈ ಕೊಟ್ಟಿತ್ತು.
1936ರಲ್ಲಿ ಭಾರತದ ಭೋಪಾಲ್‌ನಲ್ಲಿ ಜನಿಸಿದ್ದ, ಭಾರತ ವಿಭಜನೆಯ ವೇಳೆ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.
ಪಾಕಿಸ್ತಾನವನ್ನು ವಿಶ್ವದ ಮೊದಲ ಇಸ್ಲಾಮಿಕ್ ನ್ಯೂಕ್ಲಿಯರ್ ಪವರ್ ರಾಷ್ಟ್ರವನ್ನಾಗಿಸುವಲ್ಲಿ ಡಾ ಅಬ್ದುಲ್ ಖಾದೀರ್ ಖಾನ್ ಅವರ ಕೊಡುಗೆ ಅಪಾರ. ಜೊತೆಗೆ ಪಾಕಿಸ್ತಾನವನ್ನು ವಿಶ್ವದ ಏಳನೇ ಅಣ್ವಸ್ತ್ರ ಶಕ್ತಿಯನ್ನಾಗಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅಣ್ವಸ್ತ್ರ ರಹಸ್ಯಗಳನ್ನು ಉತ್ತರ ಕೊರಿಯಾ, ಲಿಬಿಯಾ ಹಾಗೂ ಇರಾನ್ ಗೆ ಸೋರಿಕೆ ಮಾಡಿದ ಆರೋಪವೂ ಇವರ ಮೇಲಿದೆ. ಹೀಗಾಗಿ 2004ರಲ್ಲಿ ಇವರನ್ನು ಬಂಧಿಸಲಾಗಿತ್ತು ಕೂಡಾ.
Discussion about this post